Spiritual: ವಿಷ್ಣು ಸಹಸ್ರನಾಮ ಹೇಳುವುದರಿಂದ ಆಗುವ ಲಾಭವೇನು..?

Spiritual: ಕಲಿಯುಗದಲ್ಲಿ ನಾವು ಮನಸ್ಸಿನಿಂದ ದೇವರ ನಾಮಸ್ಮರಣೆ ಮಾಡಿದ್ದಲ್ಲಿ, ದೇವರು ಸದಾಕಾಲ ನಮ್ಮನ್ನು ರಕ್ಷಿಸುತ್ತಾನೆ. ನಮ್ಮ ಪ್ರಾರ್ಥನೆ ಕೇಳುತ್ತಾನೆಂಬ ನಂಬಿಕೆ ಇದೆ. ಅದೇ ರೀತಿ ಕಲಿಯುಗದಲ್ಲಿ ಯಾರು ವಿಷ್ಣು ಸಹಸ್ರನಾಮ ಹೇಳುತ್ತಾರೆೋ, ಅಂಥವರ ಜೀವನ ಸುಲಭವಾಗಿರುತ್ತದೆ ಅನ್ನೋ ನಂಬಿಕೆ ಇದೆ.

ನೀವು ವಿಷ್ಣು ಸಹಸ್ರನಾಮ ಹೇಳಲು ಯಾವುದೇ ಸಮಯವಾಗಬಹುದು. ಬೆಳಿಗ್ಗೆ, ಸಂಜೆ ಯಾವಾಗ ಬೇಕಾದರೂ ನೀವು ವಿಷ್ಣು ಸಹಸ್ರನಾಮವನ್ನು ಹೇಳಬಹುದು ಅಥವಾ ಕೇಳಬಹುದು. ಅಲ್ಲದೇ, ನೀವು ಯಾರಿಂದಲೂ ವಿಶೇಷ ದೀಕ್ಷೆ ಪಡೆದು ವಿಷ್ಣು ಸಹಸ್ರನಾಮ ಹೇಳುವ ಅಗತ್ಯವಿಲ್ಲ.

ಧೈರ್ಯ ಹೆಚ್ಚಿಸಲು ಸಹಕಾರಿ: ವಿಷ್ಣು ಸಹಸ್ರನಾಮ ಹೇಳುವುದರಿಂದ ನಿಮಗೆ ಧೈರ್ಯ ಹೆಚ್ಚುತ್ತದೆ. ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಸ್ಥಿರತೆ ಇರುತ್ತದೆ. ಮನಸ್ಸಿನ ಮೇಲೆ ನಿಯಂತ್ರಣವಿರುತ್ತದೆ. ಜೀವನದಲ್ಲಿ ಅಭಿವೃದ್ಧಿಯಾಗಲು ಇದು ಸಹಕಾರಿಯಾಗಿದೆ.

ಮಾನಸಿಕ ನೆಮ್ಮದಿ ನೀಡುತ್ತದೆ: ನೀವು ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಹೇಳುವುದರಿಂದ ಅಥವಾ ಕೇಳುವುದರಿಂದ ನಿಮಗೆ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ಇಂದಿನ ಸ್ಪೀಡ್ ದಿನಚರಿಯಲ್ಲಿ ಸ್ವಲ್ಪ ಬ್ರೇಕ್ ಪಡೆದು ನಾವು ವಿಷ್ಣು ಸಹಸ್ರನಾಮ ಕೇಳುವುದು ಅಥವಾ ಹೇಳುವುದು ಅಗತ್ಯವಾಗಿದೆ.

 

About The Author