- Advertisement -
www.karnatakatv.net : ಬೆಂಗಳೂರು: ಮಹಾಮಾರಿ ಕೊರೊನಾ ವಕ್ಕರಿಸಿ ವರ್ಷ ಕಳೆದರೂ ಅದರ ಪರಿಣಾಮ ಮಾತ್ರ ಮುಂದುವರೆಯುತ್ತಲೇ ಇದೆ. ಲಾಕ್ ಡೌನ್ ನಿಂದಲೂ ಜನಜೀವನ ಆರ್ಥಿಕವಾಗಿ ಎಷ್ಟು ದುಸ್ಥಿತಿಗೆ ತಲುಪಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಷ್ಟಾದರೂ ಸಾಲದೆಂಬಂತೆ ದಿನಸಿ ವಸ್ತುಗಳಿಂದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ಪೆಟ್ರೋಲ್ ಬೆಲೆಯಂತೂ ಶತಕ ಬಾರಿಸಿ ಮುನ್ನುಗ್ಗುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೈಕಲ್ ಜಾಥಾ ಮಾಡಲಾಗುತ್ತಿದೆ. ಕಾಂಗ್ರೆಸ್ ನ ಬೆಂಗಳೂರು ನಗರ ಘಟಕದಿಂದ ರ್ಯಾಲಿ ಆರಂಭವಾಗುತ್ತಿದೆ. ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ತೈಲ ಬೆಲೆ ಖಂಡಿಸಿ ಜಾಥಾ ಹೊರಡಲಿದೆ. ಈ ಮೂಲಕ ಕೇಂದ್ರದ ವಿರುದ್ಧ ಕೈ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -

