ಹುಬ್ಬಳ್ಳಿ:ರಾಹುಲ್ ಗಾಂಧಿಗೆ ಕೋರ್ಟ್ ನಲ್ಲಿ ಮತ್ತೊಂದು ಹಿನ್ನಡೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ಧಾರೆ.ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಅಪ್ರಭುದ್ದರಾಗಿದ್ದಾರೆ.ಟ್ರಯಲ್ ಕೋರ್ಟ ಶಿಕ್ಷೆ ನೀಡಿತ್ತು ಶಿಕ್ಷೆ ರದ್ದುಗೊಳಿಸಲು ಜಿಲ್ಲಾ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು ಆದರೆ ಅಲ್ಲಿಯೂ ಕೂಡಾ ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿತ್ತು.
ಶಿಕ್ಷೆ ರದ್ದು ಮಾಡಲು ನಿರಾಕರಿದಕ್ಕೆ ಕಾಂಗ್ರೆಸ್ ಪ್ರತಿಭಟನೆ ಶುರುಮಾಡಿದ್ದಾರೆ ಆದರೆ ಇವರ ಹೋರಾಟ ಯಾರ ವಿರುದ್ದ? ಹೈಕೋರ್ಟ್ ವಿರುದ್ದಾನಾ ? ಅಂತ ಜೋಷಿ ಪ್ರಶ್ನೆ ಮಾಡಿದ್ದಾರೆ.ಈಗಾಗಲೆ 57-58 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಪ್ರಜ್ಞೆ ಇದೆಯಾ ಎಂದು ವ್ಯಂಗ್ಯ ಮಾಡಿದ್ದಾರೆ.
ಟ್ರಯಲ್ ಕೋರ್ಟ್ ನಲ್ಲಿ ಕ್ಷಮೆ ಯೋಚಿಸುವಂತೆ ಸಲಹೆ ಕೊಟ್ಟಾಗ ರಾಹುಲ್ ನಾನು ಅಂದದ್ದೆ ಸರಿ ಅಂತ ಸಮರ್ಥನೆ ಮಾಡಿ.ನನ್ನ ಹೇಳಿಕೆ ವಾಪಸು ಪಡೆಯಲ್ಲಾ ಅಂದಿದ್ದರು ರಾಹುಲ್ ಗಾಂಧಿ ಅಪ್ರಬುದ್ಧತೆ ಮತ್ತು ಅಹಂಕಾರ ದಿಂದ ಆಗಿರುವಂತದ್ದು. ಮೊದಲು ರಾಹುಲ್ ಗಾಂಧಿಗೆ ಬುದ್ದಿ ಹೇಳಲಿ. ರಾಹುಲ್ ಗಾಂಧಿ ಬುದ್ದಿಮತ್ತೆ ಕಡಿಮೆಯಿದೆ ಆದರೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಅವರ ಮನಸ್ಥಿತಿ ತೋರಿಸುತ್ತದೆ.
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಹುಬ್ಬಳ್ಳಿ- ಧಾರವಾಡ ಪೊಲೀಸರ ಟ್ವೀಟ್..