Tuesday, July 1, 2025

Latest Posts

Congress: ಗೊಡ್ಸೆ ವಿಚಾರಧಾರೆ ಹೊಂದಿರುವವರು ಗಾಂಧಿ ತತ್ವ ಒಪ್ಪುವುದಿಲ್ಲ- ರಣದೀಪ್ ಸುರ್ಜೆವಾಲಾ

- Advertisement -

Political News: ಗೋಡ್ಸೆ ವಿಚಾರಧಾರೆ ಹೊಂದಿರುವ ಜನರು ಗಾಂಧಿ ತತ್ವ ಒಪ್ಪಲು ಸಾದ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಯಾವತ್ತಿಗೂ ಸಂವಿಧಾನದ ವಿರೋಧಿ ನೀತಿ ಅನ್ನುಸರಿತ್ತಾ ಬಂದಿದೆ. ಬಿಜೆಪಿ ಸಮಾಜಿಕ ನ್ಯಾಯದ ವಿರುದ್ಧ ಕೆಲಸ‌ ಮಾಡುತ್ತದೆ. ಮೋದಿ ಮತ್ತು ಬಿಜೆಪಿ ಕಾಂಗ್ರೆಸ್ ಸಮಾವೇಶದಿಂದ ಭಯಗೊಂಡಿದ್ದಾರೆ.

ಇದೇ ಕಾರಣಕ್ಕೆ ಇಡಿ ಮೂಲಕ ಕಾಂಗ್ರೆಸ್ ನಾಯಕರನ್ನು ನಿಯಂತ್ರಿಸು ಕೆಲಸ ಮಾಡುತ್ತಿದೆ. ಬಿಜೆಪಿ ದ್ವೇಷ ಹಾಗೂ ಹಿಂಸೆಯ ರಾಜಕಾರಣ‌ ಮಾಡುತ್ತಿದೆ. ಕಾಂಗ್ರೆಸ್ ನ ಪ್ರಭಾವಿ ನಾಯಕರಾದ ರಾಹುಲ್, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ತನಿಖಾ ಸಂಸ್ಥೆ ಬಳಸಿಕೊಂಡು ದಾಳಿ ನಡೆಸುತ್ತಲೇ‌ ಬಂದಿದೆ. ಈಗ ಸಿದ್ದರಾಮಯ್ಯ ವಿರುದ್ಧ ಇಡಿ ಅಸ್ತ್ರ ಪ್ರಯೋಗಿಸಿದೆ. ಅಮಿತ್ ಶಾ ಅಂಬೇಡ್ಕರ್ ಗೆ ಅವಮಾನ ಮಾಡಿದನ್ನು ಮರೆಮಾಚಲು ಈ‌ ರೀತಿ ಆರೋಪಿಸುತ್ತಿದ್ದಾರೆ. ಇನ್ನೂ ದೆಹಲಿ ಚುನಾವಣೆ ವಿಚಾರವಾಗಿ ಪ್ರತಿಕ್ರೆಯೆ ನೀಡಿ, ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಸ್ವಂತ ಶಕ್ತಿಯ ಮೇಲೆ ಚುನಾವಣೆಗೆ ಸ್ಪರ್ಧಿಸಲಿದೆ. ಆಮ್ ಆದ್ಮಿ ದೆಹಲಿಯಲ್ಲಿ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಆ ಕಾರಣಕ್ಕೆ ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು.

- Advertisement -

Latest Posts

Don't Miss