Friday, April 18, 2025

Latest Posts

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಟಿಕೇಟ್ ಆಕಾಂಕ್ಷಿ ಶ್ರೀನಿವಾಸ್ ಹೇಳಿಕೆ..

- Advertisement -

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯನವರೇ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಎ ಶ್ರೀನಿವಾಸ್ ಹೇಳಿದ್ದಾರೆ. ಕೋಲಾರ ತಾಲೂಕಿನ ಕೋಡಿಕಣ್ಣೂರು ಗ್ರಾಮದಲ್ಲಿ ಕ್ರಿಕೆಟ್ ಕಪ್ ಟೂರ್ನಿಮೆಂಟ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಎ ಶ್ರೀನಿವಾಸ್, ಸಿದ್ದರಾಮಯ್ಯ ಅವರು ನಿಲ್ಲುವುದಿಲ್ಲ ಅಂತ ಎಲ್ಲೂ ಸಹ ಹೇಳಿಲ್ಲ. ಅವರೆ ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅವರ ಪರವಾಗಿ ಕಾಯ ವಾಚ ಮನಸ್ಸಿನಿಂದ ಅವರನ್ನು ಗೆಲ್ಲಿಸುತ್ತೆವೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಯಾವ ಘಟಬಂಧನ್ ಇಲ್ಲ. ಗುಂಪುಗಾರಿಕೆಯಿಲ್ಲ. ನಾವೆಲ್ಲರು ಒಂದೇ ಕಾಂಗ್ರೆಸ್ ಪಕ್ಷದವರು. ಒಂದು ವೇಳೆ ಸಿದ್ದರಾಮಯ್ಯ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡದೆ ಇದ್ದರೆ ನನಗೆ ಒಂದು ಅವಕಾಶ ಕೊಡಬೇಕು ಅಂತ ಕಾಂಗ್ರೆಸ್ ಹೈಕಮಾಂಡಗೆ ಕೇಳಿದ್ದೇನೆ. ಅದನ್ನು ಹೈಕಮಾಂಡ್ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

‘ಅಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ ಎಂಬಂತೆ ಸಿದ್ದರಾಮಯ್ಯ ಪರಿಸ್ಥಿತಿ ಆಗಿದೆ‌’

ರಾಮನಾಮ ಜಪ ಮಾಡಿದ ನಾಸ್ತಿಕನಿಗೆ ಕುಳಿತಲ್ಲೇ ಊಟ ಸಿಕ್ಕ ಕಥೆ.. ಭಾಗ 1

ರಾಮನಾಮ ಜಪ ಮಾಡಿದ ನಾಸ್ತಿಕನಿಗೆ ಕುಳಿತಲ್ಲೇ ಊಟ ಸಿಕ್ಕ ಕಥೆ.. ಭಾಗ 2

- Advertisement -

Latest Posts

Don't Miss