Thursday, October 30, 2025

Latest Posts

‘ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆದ ತಕ್ಷಣ ಕಾಂಗ್ರೆಸ್ ಇಬ್ಭಾಗ ಆಗುತ್ತದೆ’

- Advertisement -

Hubballi Political News: ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ ಸವದಿ, ಜನಾರ್ದನ ರೆಡ್ಡಿ ಮರಳಿ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಲಕ್ಷ್ಮಣ ಸವದಿ ಮರಳಿ ಬಿಜೆಪಿ ಬರಲ್ಲಾ ಅಂತಾ ಅವರೇ ಹೇಳಿದ್ದಾರೆ. ಮತ್ತೇ ಮಿಕ್ಕವರು ಅಷ್ಟೇ ಬೇರೆಯವರು ಬರುವ ನಿರೀಕ್ಷೆ ಇದೆ. ಈಗ ಅವರ ಹೆಸರು ಹೇಳಿದರು ಎಲ್ಲವೂ ಪ್ರಕ್ರಿಯೆಗೆ ತೊಂದರೆ. ಬಹಳಷ್ಟು ಜನ ಓರಿಜನಲ್ ಕಾಂಗ್ರೆಸ್ ನಲ್ಲಿ ಇದ್ದವರು ಬರುವುದು ಸತ್ಯ. ಇದೊಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೆಲಸ ಕಾರ್ಯಗಳ ಮೆಚ್ಚುಗೆ ಪಟ್ಟಿರುವ ಇಚ್ಚೆ. ಅದರಿಂದ ಮೋದಿ ದೊಡ್ಡ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ದೇಶ ಕಟ್ಟುವ ಸುರಕ್ಷಿತ ಇಡುವ ಅಭಿವೃದ್ಧಿ ಅಜೆಂಡಕ್ಕೆ ಒಪ್ಪಿಕೊಂಡು ಬರುತ್ತಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಮುನ್ನ ಕರಾರು ಇಟ್ಟಿರುವ ವಿಚಾರದ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,  ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಮೇಲಿನವರಿಗೆ ಬಿಟ್ಟ ವಿಚಾರ. ನನ್ನ ಹತ್ತಿರ ಯಾರು ಸಂಪರ್ಕ ಮಾಡಿಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆಯಾಗುವಾಗ ಗೈರು ಹಿನ್ನೆಲೆ, ಅದು ನನಗೆ ಗೊತ್ತಿದೆ. ನನಗ ಅನಿಸುತ್ತದೆ ಜಗದೀಶ್ ಶೆಟ್ಟರ್ ಗೃಹ ಸಚಿವ ಅಮಿತಾ ಶಾ ನಡುವೆ ಏನು ಮಾತುಕತೆ ಆಗಿದೆ ಗೊತ್ತಿಲ್ಲ ಎಂದು ಬೊಮ್ಮಾಯಿ ಸ್‌ಪಷ್ಟನೆ ನೀಡಿದ್ದಾರೆ.

ಸ್ಥಳೀಯವಾಗಿ ಅಸಮಾಧಾನ ವಿಚಾರದ ಬಗ್ಗೆ ಬೊಮ್ಮಾಯಿ ಮಾತನಾಡಿದ್ದು,  ನಾನು ನಿನ್ನೆ ಬಂದಿದ್ದೇನೆ ಏನು ಗೊತ್ತಿಲ್ಲ. I N D I A ಒಕ್ಕೂಟದಲ್ಲಿ ಬಿರುಕು. ಇದು ಮೊದಲಿನಿಂದಲೂ ಗೊತ್ತಿರುವ ವಿಚಾರ. ಹಲವಾರು ರಾಜ್ಯಗಳಲ್ಲಿ ಒಬ್ಬರನ್ನ ಒಬ್ಬರು ವಿರೋಧ ಮಾಡಿಕೊಂಡು ಬಂದಿರುವುದು. ವಿರೋಧಾಭ್ಯಾಸ ಇರುವ ಪಕ್ಷಗಳನ್ನ ಒಗ್ಗೂಡಿಸಲು ಸಾಧ್ಯವಿಲ್ಲ. ಆ ಪ್ರಯತ್ನ ಮೋದಿ ವಿರುದ್ಧ ಮಾಡಲು ಪ್ರಯತ್ನ. ತಮ್ಮ ಅಸ್ತಿತ್ವಕ್ಕಾ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿವೆ. ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಳವಾಗಿದೆ.  ಈಗಾಗಲೇ ಸಾಕಷ್ಟು ಆಂತರಿಕ ಕಚ್ಚಾಟ ಆರಂಭವಾಗಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆದ ತಕ್ಷಣ ಕಾಂಗ್ರೆಸ್ ಇಬ್ಬಾಗ ಆಗುತ್ತದೆ ಎಂದು ಬೊಮ್ಮಾಯಿ ಭವಿಷ್ಯ ನುಡಿದ್ದಾರೆ.

ಇನ್ನು ಇದರೊಂದಿಗೆ ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಹೇಳಿರುವ ಬೊಮ್ಮಾಯಿ, ಕನ್ನಡ ನಾಡಿ‌ನ ಜನತೆಗೆ ಗಣರಾಜ್ಯೋತ್ಸವ ಶುಭಾಶಯ. ನಮ್ಮ ಭಾರತದ ಗಣರಾಜ್ಯ ವಿಶೇಷವಾಗಿ ಕೂಡಿದ್ದು. ಬ್ರಿಟಿಷ್ ರ ಮೊದಲ ಪಾರ್ಲಿಮೆಂಟ್ ಕ್ಕಿಂತಲೂ ಉತ್ಕೃಷ್ಟವಾಗಿದೆ. ಎಲ್ಲ ದೇಶಗಳ ಸಂವಿಧಾನದ ಅಧ್ಯಯನ ಮಾಡಿ. ಕಾಲ ಕಾಲಕ್ಕೊ ಕೂಡ ಸ್ಪಂದನಾ ಶೀಲ ಸಂವಿಧಾನವಾಗಿದೆ. ಎಲ್ಲರಿಗೂ ಸಮಾನತೆ,ದೇಶದ ಏಕತೆ ರಾಜ್ಯಗಳ ಸ್ವಾಮಿತ್ತ ಕೊಟ್ಟ, ಎಲ್ಲರಿಗೂ ಸಮಾನತೆ ಕೊಟ್ಟ ದಿನ. ಭಾರತ 75 ವರ್ಷಗಳ ಹಿಂದೆ ಇಂಡಿಯನ್ ರಿಪಬ್ಲಿಕ್ ಆಗಿರುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.

ಘರ್ ವಾಪ್ಸಿ ವೇಳೆ ಜಗದೀಶ್ ಶೆಟ್ಟರ್ ಏನು ಬೇಡಿಕೆ ಇಟ್ಟಿದ್ದಾರೋ ಗೊತ್ತಿಲ್ಲ: ಮಹೇಶ್ ಟೆಂಗಿನಕಾಯಿ

ಪವಿತ್ರಾ ಗೌಡಗೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ವಿಜಯಲಕ್ಷ್ಮೀ ದರ್ಶನ್

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

- Advertisement -

Latest Posts

Don't Miss