Friday, October 31, 2025

Latest Posts

ಶೆಟ್ಟರ್ ಮರಳಿ ಬಿಜೆಪಿಗೆ ಹೋಗಿದ್ದಕ್ಕೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

- Advertisement -

Hubballi News: ಹುಬ್ಬಳ್ಳಿ: ಇಂದು ರಾಜ್ಯರಾಜಕೀಯದಲ್ಲಿ ಭಾರೀ ಬದಲಾವಣೆಯಾಗಿದ್ದು, ಬಿಜೆಪಿಯಿಂದ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಬಂದು, ಮತ್ತೆ ವಾಪಸ್ ಬಿಜೆಪಿಗೆ ಮರಳಿದ್ದಾರೆ.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ.  ಶೆಟ್ಟರ್ ಭಾವ ಚಿತ್ರದ ಮೇಲೆ ಪಾಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.  ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತದಲ್ಲಿ ವಿಜಯೋತ್ಸವದೊಂದಿಗೆ ಧಿಕ್ಕಾರ ಘೋಷಣೆ ಕೂಗಿದ್ದಾರೆ. ಹೊತು ಹೊತು ಪೀಡಾ ಹೋಯಿತು ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗಿ ಶೆಟ್ಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಶೆಟ್ಟರವರು ವಿಧಾನ ಸಭೆ ಚುನಾವಣೆಯಲ್ಲಿ ಸೋತಿದ್ರು. ಆದರೂ ಪಕ್ಷದಿಂದ ಅವರಿಗೆ ಪರಿಷತ್ ಸ್ಥಾನ ನೀಡಲಾಯಿತು. ಈಗ‌ ಬಿಜೆಪಿ ಸೇರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಪಕ್ಷಕ್ಕೆ ಕೆಲ ಶಾಸಕರು ಬರುವವರಿದ್ದಾರೆ ಕಾದು ನೋಡಿ: ಸಚಿವ ಸಂತೋಷ್ ಲಾಡ್

ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕು. ಈ ದೇಶ ಉಳಿಯಬೇಕೆಂದರೆ ಮೋದಿ ಬೇಕು: ಹೆಚ್.ಡಿ.ರೇವಣ್ಣ

- Advertisement -

Latest Posts

Don't Miss