Friday, April 18, 2025

Latest Posts

”ನೀವು ಕೆಟ್ಟು ಕೆರ ಹಿಡಿದು ಹೋಗಿದ್ದೀರಿ”.. ತಮ್ಮದೇ ನಾಯಕರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರು..

- Advertisement -

ಹಾಸನ : ಹಾಸನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ನೀವು ಕೆಟ್ಟು ಕೆರ ಹಿಡಿದು ಹೋಗಿದ್ದೀರಿ. ಗೆದ್ದು ಆಗೋಯ್ತು ಆಗ್ಲೆ ಸರ್ಕಾರ ರಚನೆ ಮಾಡಲು ರೆಡಿ ಆಗಿದ್ದಿರಾ ಅನ್ಕಂಡಿದಿರಾ. ನೆವರ್, ಇದೇ ರೀತಿ ಆದ್ರೆ ಎಲ್ಲೂ ಗೆಲ್ಲಲ್ಲ. ಹಾಸನ ಜಿಲ್ಲೆಗೆ ಸರಿಯಾದ ಒಬ್ಬ ಯಜಮಾನನ್ನು ನೇಮಕ ಮಾಡಿ ಎಂದು ಹೇಳಿದ್ದಾರೆ.

‘ಹೋರಾಟದಲ್ಲಿ ಪಕ್ಷ, ರಾಜಕೀಯ ಬೆರೆಸುವುದಕ್ಕೆ ನಾಚಿಕೆ ಆಗಲ್ವಾ..?’

ಎ.ಮಂಜು ಮಿನಿಸ್ಟರ್ ಮಾಡಿ ಅಂತ ಜಿಲ್ಲೆಯ ಎಲ್ಲಾ ಮುಖಂಡರು ದೆಹಲಿಗೆ ಹೋದ್ರು. ಮಂಜು ಮಂತ್ರಿ ಮಾಡಿದ್ರೆ ದೇವೇಗೌಡರ ಫ್ಯಾಮಿಲಿ ತೆಗೆದುಬಿಡ್ತಾನೆ. ಆ ಪಕ್ಷ ನಿರ್ಮೂಲನೆ ಮಾಡ್ತಾರೆ ಅನ್ಕಂಡು. ಅವನು ಮಂತ್ರಿಯಾಗಿ ಬಂದ ಜಾವಗಲ್ ಮಂಜುನಾಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡ್ದ. ಆ ಮನುಷ್ಯನ ಹತ್ತಿರ ಜೇಬಿನಲ್ಲೂ ಒಂದು ಕಾಸು ಇರಲಿಲ್ಲ. ಅವನು ಆ ಕಡೆ ಈ ಕಡೆ ನೆಗೆದಾಡಿ ಆರು ವರ್ಷ ತಳ್ದ. ನಾವು ಒಂದು ಎಲೆಕ್ಷನ್ ಗೆಲ್ಲಲಿಲ್ಲ, ಎಂಎಲ್‌ಎ ನೋಡಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರವೇ ಪ್ರತಿಭಟನೆ..

ಅಲ್ಲದೇ, ದುಡ್ಡು, ಆದಾಯ ಮಂತ್ರಿ ಮಾಡ್ಕಂಡು ಹೋಗದು. ಇಲ್ಲಿ ನಾವು ದನಕ್ಕೆ ಹೊಡೆದಂಗೆ ಹೊಡುಸ್ಕಳದು. ನೀವು ಜೆಡಿಎಸ್‌ನವರ ಜೊತೆ ಒಪ್ಪಂದ ಮಾಡ್ಕಳದು. ಪಕ್ಷ ಕಟ್ಟುವ ಮೂಲ‌ ಕಾಂಗ್ರೆಸ‌್ಸಿಗರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿ. ಇಲ್ಲಾ ಒಬ್ಬರು ಎಂಎಲ್‌ಎ ಆಗಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಿಟ್ಟಿಗೆ ಉತ್ತರಿಸಲಾಗದೇ, ನಾಯಕರು ಮೊಬೈಲ್ ನೋಡುತ್ತ ಕುಳಿತಿದ್ದರು.

- Advertisement -

Latest Posts

Don't Miss