ಈ ರಾಶಿಯ ಜೀವನ ಸಂಗಾತಿ ಸಿಗುವುದು ನಿಮ್ಮ ಪುಣ್ಯ ಅಂದುಕೊಳ್ಳಿ

Horoscope: ಮದುವೆ ಅನ್ನೋದು ಗಂಡು ಹೆಣ್ಣು ಇಬ್ಬರ ಜೀವನವನ್ನೂ ಬದಲಾಯಿಸುವ ಸಮಯ. ಮದುವೆಯ ಬಳಿಕ ಕೆಲವರ ಜೀವನ ಅತ್ಯುತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಸಮಯ ಕೆಟ್ಟದಾಗಿ ಬದಲಾಗುತ್ತದೆ. ಯಾಕಾದ್ರೂ ಮದುವೆಯಾದೆನೋ ಎಂದು ಪ್ರತೀಕ್ಷಣ ಎನ್ನಿಸುವಷ್ಟು ಬದಲಾಗುತ್ತದೆ. ಆದರೆ ಈಗ ನಾವು ಹೇಳುವ ರಾಶಿಯವರು ಜೀವನಸಂಗಾತಿಯಾಗಿ ಸಿಕ್ಕರೆ, ಅಂಥವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯಾವುದು ಈ ಉತ್ತಮ ರಾಶಿಗಳು ಅಂತಾ ತಿಳಿಯೋಣ ಬನ್ನಿ..

ವೃಷಭ: ವೃಷಭ ರಾಶಿಯವರಿಗೆ ಭೂಮಿಯಷ್ಟು ತಾಳ್ಮೆ ಇರುತ್ತದೆ. ಅದರಲ್ಲೂ ವೃಷಭ ರಾಶಿಯ ಮಹಿಳೆಯರು, ಮನೆಯ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಂಡು, ಎಲ್ಲ ಕೆಲಸಗಳನ್ನು ನಿಭಾಯಿಸಿಕೊಂಡು, ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು, ತಮ್ಮವರಿಗಾಗಿಯೇ ಜೀವನ ಮುಡಿಪಾಗಿಡುತ್ತಾರೆ.

ಕರ್ಕಾಟಕ: ಕರ್ಕಾಟಕ ರಾಶಿಯವರು ಸೂಕ್ಷ್ಮ ಸ್ವಭಾವದವರು. ಭಾವನಾತ್ಮಕ ಜೀವಿಗಳು. ಜೀವನ ಸಂಗಾತಿಯನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಾರೆಂದರೆ, ಅವರ ಸಲುವಾಗಿ ಏನು ಮಾಡಲು ಕೂಡ ಸಿದ್ಧರಾಗಿರುತ್ತಾರೆ. ಅಲ್ಲದೇ, ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವ ಇವರು, ರಕ್ತ ಸಂಬಂಧವಿಲ್ಲದಿದ್ದವರಿಗೂ ಕೂಡ ಗೌರವ ನೀಡುತ್ತಾರೆ.

ಸಿಂಹ: ಸಿಂಹ ರಾಶಿಯವರು ನಾಯಕತ್ವಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಆದರೆ ಪ್ರೀತಿಪಾತ್ರರನ್ನು ಅಷ್ಟೇ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ನಿಸ್ವಾರ್ಥ ಪ್ರೀತಿ ತೋರುವ ಗುಣ ಇವರದ್ದಾಗಿರುವುದರಿಂದ, ಸಿಂಹ ರಾಶಿಯ ಪುರುಷರು ಜೀವನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಧನು: ಧನು ರಾಶಿಯವರು ಕುಟುಂಬಸ್ಥರ ಮೇಲೆ ಅತೀ ಅಕ್ಕರೆಯ ಮನೋಭಾವ ಉಳ್ಳವರಾಗಿರುತ್ತಾರೆ. ಯಾವ ಸಮಯದಲ್ಲೂ ಮನೆಜನರನ್ನು ಬಿಟ್ಟುಕೊಡಲು ಅವರು ಇಷ್ಟಪಡುವುದಿಲ್ಲ. ಮನೆಜನರು ಅನಾರೋಗ್ಯಕ್ಕೀಡಾದಾಗ, ಇತರರೊಂದಿಗೆ ಜಗಳವಾದಾಗ, ಅಥವಾ ಯಾವುೇದ ಸಂದರ್ಭದಲ್ಲಿ ಇವರು, ತಮ್ಮ ಮನೆಜನರ ಪರ ನಿಲ್ಲುತ್ತಾರೆ. ಜೀವನ ಸಂಗಾತಿಯನ್ನು ಕೂಡ ಅಷ್ಟೇ ಪ್ರೀತಿಸುತ್ತಾರೆ.

About The Author