Wednesday, December 3, 2025

Latest Posts

ಗ್ರಾಹಕರಿಗೆ ಮತ್ತೆ ಶಾಕ್: ಚಿನ್ನದ ದರ ಏರಿಕೆ!

- Advertisement -

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬುಧವಾರ ಏರಿಕೆಯಾಗಿವೆ. ಚಿನ್ನದ ಬೆಲೆ 35 ರೂ ಹೆಚ್ಚಾಗಿದ್ರೆ, ಬೆಳ್ಳಿ ಬೆಲೆ 3 ರೂ ಏರಿದೆ. ಆಭರಣ ಚಿನ್ನದ ಬೆಲೆ 11,935 ರೂನಿಂದ 11,970 ರೂಗೆ ಏರಿಕೆ ಕಂಡಿದೆ. ಅಪರಂಜಿ ಚಿನ್ನದ ಬೆಲೆ 13,058 ರೂ ಆಗಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 191 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 201 ರೂ ಆಗಿದೆ.

ಮಂಗಳವಾರ ಸ್ವಲ್ಫ ಕಡಿಮೆಯಾಗಿದ್ದ ಬಂಗಾರದ ಬೆಲೆ ಇವತ್ತು ಮತ್ತೆ ಏರಿಕೆ ಹಾದಿಗೆ ಬಂದಿದೆ. ಬುಧವಾರ ಇದರ ಬೆಲೆ ಗ್ರಾಂ​ಗೆ 35 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ ಗ್ರಾಂ​ಗೆ 11,970 ರೂಗೆ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆ 9,800 ರೂ ಸಮೀಪಕ್ಕೆ ಬಂದಿದೆ. ವಿದೇಶಗಳಲ್ಲಿ ಬಹುತೇಕ ಕಡೆ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಕೆಲವೆಡೆ ಬೆಲೆ ಇಳಿಕೆ ಆಗಿದೆ. ಇನ್ನು ಬೆಳ್ಳಿ ಬೆಲೆ ಮತ್ತೆ 3 ರೂ ಗೆ ಹೆಚ್ಚಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಂ​ನ 22 ಕ್ಯಾರಟ್ ಚಿನ್ನದ ಬೆಲೆ 1,19,700 ರುಪಾಯಿ ಇದೆ. 24 ಕ್ಯಾರಟ್​ನ ಶುದ್ಧ ಚಿನ್ನದ ಬೆಲೆ 1,30,580 ರುಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 19,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ​ಗೆ 1,19,700 ರುಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 19,100 ರೂ ಇದೆ.

ಇನ್ನು ಬೆಂಗಳೂರು ನಗರದಲ್ಲಿನ ಚಿನ್ನ, ಬೆಳ್ಳಿ ಬೆಲೆ ನೋಡೋದಾದ್ರೆ 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 11,970 ರೂ ಹಾಗು 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 13,058 ರೂ ಆಗಿದೆ. ಬೆಳ್ಳಿ ಬೆಲೆ 1 ಗ್ರಾಂಗೆ 191 ರೂ ಆಗಿದೆ.

ಭಾರತದಲ್ಲಿ 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 13,058 ರೂ ಆಗಿದೆ.
22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 11,970 ರೂ. 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 9,794 ರೂ ಹಾಗು ಬೆಳ್ಳಿ ಬೆಲೆ 1 ಗ್ರಾಂಗೆ 191 ರೂ ಇದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss