International News: ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಂತರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಅಧಿಕಾರದಿಂದ ಉಚ್ಛಾಟಿತವಾಗಿ, ದೇಶಭ್ರಷ್ಟ ಎನ್ನಿಸಿಕ“ಂಡ ಕಾರಣಕ್ಕೆ, ದೇಶದಿಂದ ಓಡಿಹೋದ ಕಾರಣಕ್ಕೆ ಜೈಲು ಶಿಕ್ಷೆ ವಿಧಿಸಲಾಗಿದೆ. ಆಗಸ್ಟ್ 4, 2024ರಂದು ಬಾಂಗ್ಲಾದಲ್ಲಿ ಪ್ರತಿಭಟನೆಯಾಗಿ, ಪ್ರಧಾನಿ ನಿವಾಸದ ಮೇಲೆ ಜನ ಮುತ್ತಿಗೆ ಹಾಕಿದ್ದರು. ಈ ವೇಳೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ನೀಡಿ, ದೇಶ ಬಿಟ್ಟು ಭಾರತಕ್ಕೆ ಪಲಾಯನ ಮಾಡಿದ್ದರು. ನವದೆಹಲಿಯಲ್ಲಿ, ಅವರು ವಾಸಿಸುತ್ತಿದ್ದಾರೆ.
ಇದಕ್ಕೂ ಮುನ್ನ ಲಂಡನ್‌ನಲ್ಲಿ ವಾಸಿಸಲು ಅವರು ಅನುಮತಿ ಪಡೆದಿದ್ದು, ಅಲ್ಲಿನ ಸರ್ಕಾರ ನಿರಾಕರಿಸಿತ್ತು. ಅದಾದ ಬಳಿಕ ಶೇಖ್ ಹಸೀನಾ ಭಾರತಕ್ಕೆ ಧಾವಿಸಿದ್ದರು. ಶೇಖ್ ಹಸೀನಾ ದೇಶ ಬಿಟ್ಟರೂ ಅಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ಕಡಿಮೆಯಾಗಿರಲಿಲ್ಲ. ಈ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಇದೀಗ ಶೇಖ್ ಹಸೀನಾಳನ್ನು ದೇಶಭ್ರಷ್ಟರೆಂಬ ಪಟ್ಟ ಕಟ್ಟಿ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.