Friday, July 18, 2025

Latest Posts

ತಾಕತ್ತಿದ್ರೆ PFI ಬ್ಯಾನ್ ಮಾಡಿ: RSS ಬ್ಯಾನ್ ಬಗ್ಗೆ ಮಾತನಾಡಿದ್ದ ಪ್ರಿಯಾಂಕ್ ಖರ್ಗೆಗೆ ಯತ್ನಾಳ್ ಸವಾಲ್

- Advertisement -

Political News: ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ಆರ್‌ಎಸ್‌ಎಸ್‌ ಬ್ಯಾನ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವ ಮಾತು, ಇದೀಗ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ತಿರುಗೇಟು ನೀಡಿರುವ ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ನಿಮಗೆ ತಾಕತ್ ಇದ್ರೆ, ಪಿಎಐಫ್ ಬ್ಯಾನ್ ಮಾಡಿ ಎಂದು ಸವಾಲ್ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆಯವರ ತಲೆ ಕೆಟ್ಟಿದೆ. ಅದು ಶುದ್ಧವಿಲ್ಲ. ಎಷ್ು ವಿಷ ತುಂಬಿದೆ. ಆರ್‌ಎಸ್‌ಎಸ್‌ ಏನ್ ಬ್ಯಾನ್ ಮಾಡ್ತಿ, ಪಿಎಫ್ಐ ಬ್ಯಾನ್ ಮಾಡಿ ನಿಮಗೆ ತಾಕತ್ತಿದ್ದರೆ ಎಂದು ಹೇಳಿದ್ದಾರೆ.

ಈ ಸಂಘಟನೆಯವರು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಆರ್‌ಎಸ್‌ಎಸ್‌ ಬ್ಯಾನ್ ಮಾಡ್ತೇವೆ ಎನ್ನುತ್ತಿದ್ದಾರೆ. ನಿಮಗೆ ದಲಿತರ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ..? ದಲಿತ ಸಮುದಾಯಕ್ಕೆ ನೀವು ಏನು ಮಾಡಿದ್ದೀರಿ..? ಕಲಬುರಗಿಯ ದಲಿತರಿಗೆ ಎಷ್ಟು ಸಹಾಯ ಮಾಡಿದ್ದೀರಿ..? ಎಷ್ಟು ದಲಿತರಿಗೆ ಮನೆ ಕಟ್ಟಿಸಿಕ“ಟ್ಟೀದ್ದೀರಿ ಎಂದು ಯತ್ನಾಳ್ ಪ್ರಿಯಾಂಕ್ ಖರ್ಗೆಗೆ ಪ್ರಶ್ನಿಸಿದ್ದಾರೆ.

ನಾವು ಮೀಡಿಯಾದಲ್ಲಿ ಆಗಾಗ ನೋಡುತ್ತಿರುತ್ತೇವೆ. ಖರ್ಗೆಯವರಿಗೆ ಯಾವ ರಾಜ್ಯದಲ್ಲಿ, ಯಾವ ದೇಶದಲ್ಲಿ, ಯಾವ ಊರಿನಲ್ಲಿ ಎಷ್ಟು ಆಸ್ತಿ ಇದೆ ಎಂದು ನೋಡುತ್ತಿರುತ್ತೇವೆ. ನಿಮ್ಮ ಸ್ವಂತ ಖರ್ಚಿನಿಂದ ನೀವು ದಲಿತರಿಗೆ ಏನು ಸಹಾಯ ಮಾಡಿದ್ದೀರಿ ಎಂದು ಯತ್ನಾಳ್ ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಅಲ್ಲದೇ, ಇವರೆಲ್ಲ ಬಾಬಾ ಸಾಹೇಬರ್ ಅನುಯಾಯಿಗಳಲ್ಲ. ಇವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅನುಯಾಯಿಗಳು. ಪ್ರಿಯಾಂಕ್ ಖರ್ಗೆಗೆ ಮತಿಭ್ರಮಣೆಯಾಗಿದೆ. ಆರ್‌ಎಸ್‌ಎಸ್‌ನ್ನು ನೆಹರೂಗೆ ಬ್ಯಾನ್ ಮಾಡಲು ಆಗಲಿಲ್ಲ. ವಲ್ಲಭಭಾಯಿ ಪಟೇಲರು ಗೃಹಮಂತ್ರಿಗಳಾಗಿದ್ದಾಗ, ಆ ಆದೇಶವನ್ನು ಅವರೇ ವಾಪಸ್ ತೆಗೆದುಕ“ಂಡಿದ್ದಾರೆ. ಆರ್‌ಎಸ್‌ಎಸ್‌ನ್ನು ಈ ದೇಶದಿಂದ, ಮಣ್ಣಿನಿಂದ ಯಾರಿಗೂ ತೆಗೆಯಲು ಸಾಧ್ಯವಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

- Advertisement -

Latest Posts

Don't Miss