ಹಾಸನ: ಅದಿ ದೇವತೆ ಹಾಸನಾಂಬೆ ದೇವಿಯವರ ಗರ್ಭಗುಡಿ ಬಾಗಿಲು ತೆಗೆದು ಈಗಾಗಲೇ ಲಕ್ಷಾಂತರ ಮಂದಿಗೆ ದರ್ಶನ ನೀಡಿದ್ದು, ಬರುವ ಭಕ್ತರು ಯಾರು ಹಸಿವಿನಿಂದ ಹೋಗಬಾರದೆಂದು ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡ ಅವರು ಪ್ರಸಾದ ರೂಪದಲ್ಲಿ ಅನ್ನದಾನ ಮಾಡುತ್ತಿರುವುದಾಗಿ ಪ್ರಸಂಸೆಯ ಮಾತುಗಳು ಕೇಳಿ ಬಂದಿದೆ.
‘ಹಾಸನಾಂಬೆ ದೇವಸ್ಥಾನದಲ್ಲಿ ಶಾಸಕ ಪ್ರೀತಂ ಗೌಡ್ರ ಕೀಳು ಮಟ್ಟದ ರಾಜಕಾರಣ’
ಭಾಸ್ಕರ್ ಶೆಟ್ಟಿ ಮತ್ತು ರೂಪೇಶ್ ಇತರರು ಮಾಧ್ಯಮದೊಂದಿಗೆ ಮಾತನಾಡಿ, ಕ್ಷೇತ್ರದ ಶಾಸಕರಾದ ಪ್ರೀತಂ ಜೆ. ಗೌಡರ ನೇತೃತ್ವದಲ್ಲಿ ಹಾಸನಾಂಬೆ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಇದುವರೆಗೂ ಲಕ್ಷಾಂತರ ಜನರು ಪ್ರಸಾದವನ್ನು ಸ್ವೀಕರಿಸಿದ್ದು, ನಗರಸಭೆ ಸದಸ್ಯರು ಹಾಗೂ ಯುವ ಮುಖಂಡರಾದ ಪುನಿತ್ ಹಾಗೂ ಪ್ರದೀಪ್ ಮತ್ತು ಕಾರ್ಯಕರ್ತರು ಹಗಲಿರುಳು ಜಾತ್ರೆ ಮುಗಿಯುವವರೆಗೂ ಶ್ರಮಿಸಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದರು.
ಹಾಸನಾಂಬೆಯ ದರ್ಶನದ ವೇಳೆ ಪ್ರೀತಂಗೌಡರನ್ನು ತರಾಟೆಗೆ ತೆಗೆದುಕೊಂಡ ಭಕ್ತರು..
ಹೊರ ಊರಿನಿಂದ ಬರುವ ಭಕ್ತಾಧಿಗಳು ದೇವಿ ದರ್ಶನ ಮಾಡಿದ ನಂತರ ರಾತ್ರಿಯಾಗುತ್ತಿದ್ದು, ಅವರಿಗೆ ಹೋಟೆಲ್ ನಲ್ಲೂ ಊಟ ಸಿಗುತ್ತಿರಲಿಲ್ಲ. ಸಮಸ್ಯೆ ಆಗುತ್ತಿತ್ತು. ರಾತ್ರಿ ೧೨ ಗಂಟೆಯಾದ್ರು ಯಾರು ಹಸಿವಿನಿಂದ ಇರುತ್ತಿರಲಿಲ್ಲ. ತೃಪ್ತಿಯಿಂದ ಪ್ರಸಾದ ಸ್ವೀಕರಿಸುತ್ತಿದ್ದಾರೆ. ಯಾರೆ ಬಂದರೂ ಅವರು ಹಸಿವಿನಿಂದ ಇರಬಾರದು ಎನ್ನುವ ಉದ್ದೇಶದಲ್ಲಿ ಶಾಸಕರ ದಿಟ್ಟ ನಿರ್ಧಾರದಲ್ಲಿ ಅವರ ಸಹಕಾರದಲ್ಲಿ ಒಳ್ಳೆಯ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.