ಕುಕ್ಕರ್ ಬ್ಲಾಸ್ಟ್ ಪ್ರಕರಣ: ಭಯೋತ್ಪಾದಕನದ್ದು ಪಶ್ಚಾತಾಪದ ಹೇಳಿಕೆ ಅಲ್ಲ ಎಂದ ಸಿ.ಟಿ.ರವಿ

News: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಮಹಮ್ಮದ್ ಶಾರೀಖ್ ಸ್ಪೋಟ ಮಾಡಲು ಪ್ಲಾನ್ ಮಾಡಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಸಿ.ಟಿ.ರವಿ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಖ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಐಸಿಸ್ ಸಂಘಟನೆಯಿಂದ ಪ್ರೇರಣೆ ಪಡೆದಿದ್ದ ಈ ಸ್ಥಳೀಯ ಉಗ್ರ, ಭಾರತದ ಪ್ರಮುಖ ದೇವಾಲಯಗಳನ್ನು ನಾಶಪಡಿಸುವ ಉದ್ದೇಶ ಹೊಂದಿದ್ದ ಎಂದಿದ್ದಾರೆ.

ಅದೃಷ್ಟವಶಾತ್, ಆತನ ಬಾಂಬಿನ ಟೈಮರ್ ತಪ್ಪಾಗಿದ್ದರಿಂದ ಅದು ಮೊದಲೇ ಸ್ಫೋಟಿಸಿತ್ತು. ಇಂದು ತನಗೆ ಪಶ್ಚಾತ್ತಾಪವಿದೆ ಎಂದು ಆತ ಹೇಳಿಕೆ ನೀಡಿರುವುದು ಶಿಕ್ಷೆ ಕಡಿಮೆಯಾಗಲಿ ಎನ್ನುವ ಉದ್ದೇಶದಿಂದಲೇ ಹೊರತು, ತಾನು ಮಾಡಿದ್ದು ತಪ್ಪು ಎನ್ನುವ ಯೋಚನೆಯಿಂದ ಖಂಡಿತಾ ಅಲ್ಲ. ಶಾರೀಖ್‌ನಂತೆ ಸಾಕಷ್ಟು ಜನರನ್ನು ಭಯೋತ್ಪಾದನೆಯ ಹಾದಿ ಹಿಡಿಯುವಂತೆ ಮಾಡುವ ಬೋಧಕರು, ಸಿಂಡಿಕೇಟ್‌ಗಳು, ಸ್ಲೀಪರ್ ಸೆಲ್‌ಗಳು ನಮ್ಮ ನಡುವೆ ಇವೆ. ಇದರ ಕುರಿತು ಸರ್ಕಾರ ಅತ್ಯಂತ ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲೇಬೇಕು. ದೇವಾಲಯಗಳನ್ನು ಧ್ವಂಸ ಮಾಡಲು ಆಲೋಚಿಸುವ ದುಷ್ಟ ಶಕ್ತಿಗಳನ್ನು ಮಟ್ಟಹಾಕಲೇಬೇಕು ಎಂದು ರವಿ ಆಗ್ರಹಿಸಿದ್ದಾರೆ.

About The Author