Health Tips: ಬೆಳಗ್ಗಿನ ತಿಂಡಿ, ಮಧ್ಯಾಹ್ನ ರಾತ್ರಿಯ ಊಟ, ಹೀಗೆ ಎಲ್ಲ ಸಮಯದಲ್ಲೂ ತಿನ್ನಬಹುದಾದ ಆಹಾರ ಅಂದ್ರೆ ಅದು ಚಪಾತಿ, ರೊಟ್ಟಿ. ರೊಟ್ಟಿಯನ್ನು ಬಹುತೇಕರು ಮೂರು ಹೊತ್ತು ತಿನ್ನುವುದಿಲ್ಲ. ಆದರೆ ಚಪಾತಿಯನ್ನು ಮಾತ್ರ ಮೂರು ಹೊತ್ತಿನಲ್ಲಿ ಯಾವಾಗ ಬೇಕಾದ್ರೂ ಮಾಡಿ ತಿನ್ನಬಹುದು. ಆದ್ರೆ ಗೋಧಿ ಹಿಟ್ಟಿಗಿಂತಲೂ, ಜೋಳದ ರೊಟ್ಟಿ ಆರೋಗ್ಯಕ್ಕೆ ಉತ್ತಮ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಯಾರಾದರೂ ತೂಕ ಇಳಿಸಲು ಪ್ರಯತ್ನಿಸುತ್ತಿದ್ದು, ಡಯಟ್ ಮಾಡುತ್ತಿದ್ದಲ್ಲಿ, ಅಥವಾ ತೂಕವನ್ನು ಮೆಂಟೇನ್ ಮಾಡಲು ಪ್ರಯತ್ನಿಸುತ್ತಿದ್ದಲ್ಲಿ, ಅಂಥವರಿಗೆ ರೊಟ್ಟಿ ಅತ್ಯುತ್ತಮ ಆಹಾರ. ಏಕೆಂದರೆ, ಜೋಳದ ರೊಟ್ಟಿ ಸೇವನೆಯಿಂದ ದೇಹದ ತೂಕ ಸರಿಯಾಗಿ ಇರುತ್ತದೆ. ರೊಟ್ಟಿ ತಿಂದರೆ, ದಪ್ಪವಾಗುವ ಯಾವುದೇ ಹೆದರಿಕೆ ಇರುವುದಿಲ್ಲ. ಹಾಗಾಗಿಯೇ ಹಳ್ಳಿಜನ, ತೆಳ್ಳಗೆ ಇದ್ದರೂ, ಗಟ್ಟಿ ಮುಟ್ಟಾಗಿರುತ್ತಾರೆ. ಏಕೆಂದರೆ, ಅವರು ರೊಟ್ಟಿಯ ಜೊತೆ ಹಸಿ ತರಕಾರಿಯನ್ನು ತಿನ್ನುತ್ತಾರೆ. ಬಾಣಂತನ ಮುಗಿದ ಬಳಿಕ ಕೆಲವರು ರೊಟ್ಟಿ ಡಯಟ್ ಮಾಡಿಯೇ, ತಮ್ಮ ತೂಕ ಇಳಿಸಿಕೊಳ್ಳುತ್ತಾರೆ.
ಇನ್ನು ಯಾವ ಆಹಾರ ಸೇವಿಸಿದರೂ, ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿಲ್ಲವೆಂದಲ್ಲಿ ಜೋಳದ ರೊಟ್ಟಿಯನ್ನು ಸೇವಿಸಿ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಅಲ್ಲದೇ, ನಮ್ಮ ದೇಹಕ್ಕೆ ಶಕ್ತಿ, ಚೈತನ್ಯವನ್ನೂ ತುಂಬುತ್ತದೆ. ನಿಮಗೆ ರೊಟ್ಟಿ ತಿನ್ನಲು ಇಷ್ಟವಿಲ್ಲದಿದ್ದಲ್ಲಿ, ನೀವು ದೋಸೆ, ಮುಟಗಿ, ಏನೂ ಬೇಕಾದ್ರೂ ಮಾಡಿ ಸೇವಿಸಬಹುದು. ಒಟ್ಟಿನಲ್ಲಿ ಜೋಳದ ಹಿಟ್ಟು ಬೆಂದು ನಿಮ್ಮ ದೇಹ ಸೇರುವುದು ಮುಖ್ಯ.
ರೊಟ್ಟಿ ಸೇವನೆ ಮಾಡುವವರನ್ನು ನೀವು ನೋಡಿ. ಅವರಿಗೆ ಯಾವುದೇ ಖಾಯಿಲೆ ಇರುವುದಿಲ್ಲ. ಅವರು ಗಟ್ಟಿಮುಟ್ಟಾಗಿ, ಎಷ್ಟೇ ವಯಸ್ಸಾದರೂ, ಭಾರವಾದ ವಸ್ತುವನ್ನು ಎತ್ತುವ ಕೆಲಸವಾಗಲಿ, ಕೃಷಿ ಕೆಲಸವಾಗಲಿ ಮಾಡುತ್ತಾರೆ. ಏಕೆಂದರೆ, ರೊಟ್ಟಿಯ ಸೇವನೆಯಿಂದ ಮೂಳೆ ಗಟ್ಟಿಮುಟ್ಟಾಗಿರುತ್ತದೆ. ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಹೀಗಾಗಿ ನೀವು ಪರಿಪೂರ್ಣವಾಗಿ ಆರೋಗ್ಯವಾಗಿರಬೇಕು ಅಂದ್ರೆ ಜೋಳದ ಹಿಟ್ಟಿನ ಆಹಾರದ ಸೇವನೆ ಮಾಡಿ. ನಿಮಗೆ ಜೋಳದ ಹಿಟ್ಟೆಂದರೆ, ಅಲರ್ಜಿ ಎಂದಲ್ಲಿ, ಅದರ ಸೇವನೆ ಮಾಡದಿದ್ದಲ್ಲಿ ಒಳ್ಳೆಯದು.