Sunday, September 8, 2024

Latest Posts

ರೈತರು ಇದ್ದಕಡೆ ಬಂತು ಕೊರೊನಾ ಲಸಿಕೆ

- Advertisement -

www.karnatakatv.net :ರಾಯಚೂರು : ಜಿಲ್ಲೆಯಲ್ಲಿ ಕರೋನ ಲಸಿಕ್ಕೆ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಲಸಿಕೆಯನ್ನು ಪಡೆಯಲು ಹಿಂಜರೆಯುತ್ತಿದ್ದಾರೆ. ಕಾರಣ ಆರೋಗ್ಯ ಸಿಬ್ಬಂದಿಯವರು  ಹಳ್ಳಗಳಲ್ಲಿ ರೈತರಿಗೆ ಹಾಗೂ ಕಾರ್ಮಿಕರಿಗೆ  ಲಸಿಕೆ ನೀಡುವ ಮೂಲಕ  ಆರೋಗ್ಯ ಇಲಾಖೆ ನಿಗದಿತ  ಸಮಯದಲ್ಲಿ ಗುರಿ ಮುಟ್ಟಲು ಯತ್ನಿಸುತ್ತಿದೆ.

ರಾಯಚೂರು ಜಿಲ್ಲೆಯ  ತಾಲ್ಲೂಕುಗಳಲ್ಲಿ ಕೆಲವು ಹಳ್ಳಿಗಳಲ್ಲಿ ಲಸಿಕೆ ಹಾಕಿಸಲು ಹಿಂದೇಟು ಹಾಕಿದ್ದು, ಮೂರನೇ ಅಲೆ ತಡೆಗಟ್ಟುವ ಹಿನ್ನೆಲೆಯಲ್ಲಿ  ರಾಯಚೂರು ತಾಲೂಕಿನ ಗಿಲ್ಲೆಸೂಗುರ್ ಗ್ರಾಮ ಪಂಚಾಯತಿ ವ್ಯಾಪ್ತಿ ಗೆ ಬರುವ ಕೆಲವು ಹಳ್ಳಿಗಳಿಗೆ ಆರೋಗ್ಯ ಸಂಬಂಧಿಸಿ ರೈತರ ಹೊಲಕ್ಕೆ ತೆರಳಿ ಲಸಿಕೆ ನೀಡುತ್ತಿದ್ದರು.

ಇಷ್ಟು ದಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು , ಅಂಗನವಾಡಿ,  ಲಸಿಕಾ ಅಭಿಯಾನ ಕೇಂದ್ರಗಳಲ್ಲಿ ಲಸಿಕೆಯನ್ನು ಹಾಕಿಸಲಾಗುತ್ತಿತ್ತು, ಆದರೆ ಈಗ ಆರೋಗ್ಯ ಸಿಬ್ಬಂದಿ ಕಾರ್ಮಿಕರು ಇದ್ದ ಜಾಗಕ್ಕೆ ತೆರಳಿ ಲಸಿಕೆ ನೀಡುತ್ತಿದ್ದಾರೆ. ಆರೋಗ್ಯ ಸಿಬ್ಬಂದಿಗಳು ತಾಲೂಕಿನ ಗಿಲ್ಲೆಸೂಗುರ್  ಚಂದ್ರಬಂಡ , ಗಾಣಧಾಳ, ಇಡಾಪನೂರ್ , ಗುಂಜಾಳ್ಳಿ ಸೇರಿದಂತೆ ಹಳ್ಳಿಗಳ ಕಡೆ ಹೆಜ್ಜೆ ಹಾಕಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss