ಅರ್ಜುನ್ ಸರ್ಜಾಗೆ ತಗುಲಿದ ಕೊರೋನಾ ವೈರಸ್..!

www.karnatakatv.net:ಕೊರೋನಾ ವೈರಸ್ ಇಡಿ ಪ್ರಪಂಚದಾದ್ಯoತ ಹಬ್ಬಿ ಜನರಿಗೆ ಸಮಸ್ಯೆ ಉಂಟುಮಾಡಿತ್ತು. ಸದ್ಯ ಭಾರತದಲ್ಲಿ ಕೊರೋನಾ ಕೇಸುಗಳು ಕೊಂಚ ಕಡಿಮೆ ಇದೆ. ಯಾರನ್ನು ಬಿಡದ ಈ ಕೊರೋನಾ ಇದೀಗಾ ಅರ್ಜುನ್ ಸರ್ಜಾಗು ತಗುಲಿದೆ. ಕನ್ನಡ ಚಿತ್ರರಂಗದಿoದ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿ ಹಲವು ಭಾಷೆಗಳಲ್ಲಿ ಗುರಿಸಿಕೊಂಡು ಪಂಚಭಾಷ ನಟ ಎಂದಲೇ ಕರೆಸಿಕೊಂಡಿದ್ದ ಅರ್ಜುನ್ ಸರ್ಜಾಗೆ ಕೊರೋನ ತಗುಲಿರುವುದು ಖಚಿತವಾಗಿದೆ.

ಸದ್ಯ ಈ ವಿಷಯವನ್ನು ಅರ್ಜುನ್ ಸರ್ಜಾರವರೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊoಡಿದ್ದಾರೆ.
“ಹಾಯ್ ಎಲ್ಲರಿಗೂ, ನನಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಅಗತ್ಯ ಕ್ರಮಗಳನ್ನು ಕೈಗೊಂಡು, ನಾನು ಐಸೋಲೇಟ್ ಆಗಿರುವೆ. ನನ್ನ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರೂ ದಯವಿಟ್ಟು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ. ನಾನು ಆರಾಮಾಗಿದ್ದೀನಿ. ದಯವಿಟ್ಟು ನೀವೆಲ್ಲರೂ ಸೇಫ್ ಆಗಿರಿ, ಮಾಸ್ಕ್ ಧಿರಿಸುವುದನ್ನು ಮರೆಯಬೇಡಿ. ರಾಮ ಭಕ್ತ ಹನುಮಾನ್ ಕಿ ಜೈ” ಎಂದು ಅರ್ಜುನ್ ಸರ್ಜಾ ಬರೆದುಕೊಂಡಿದ್ದಾರೆ.

About The Author