ಮಡಾಳರನ್ನು ಬಂದಿಸದಿದ್ದಕ್ಕೆ ಕೈ ನಾಯಕರು ಗರಂ

political news..

ಕಳೆದೊಂದು ವಾರದಿಂದ ಭ್ರಷ್ಟಾಚಾರದಲ್ಲಿ ಬಂದಿಯಾಗಿರುವ ದಾವಣಗೆರೆ ಚನ್ನಗಿರಿ ಶಾಸಕನ ಪುತ್ರ ಪ್ರಶಾಂತ್ ನನ್ನು ಈಗಾಗಲೆ ವಿಚಾರಣೆಗೆ ಒಳಪಡಿಸಿದ್ದು , ಶಾಸಕ ಮಡಾಳ್ ಅವರನ್ನು ಸಹ ಬಂದಿಸಲು ಅಧಿಕಾರಿಗಳು ಮುಂದಾದಾಗ ಶಾಸಕರು ಅವರ ನಿವಾಸದಿಂದ ಕಾಲ್ಕಿತ್ತು ತಲೆಮರೆಸಿಕೊಂಡಿದ್ದಾರೆ.

ಅವರನ್ನು ಇನ್ನು ಸಹ ಅಧಿಕಾರಿಗಳು ಹುಡುಕಲು ಬೇಜವಬ್ದಾರಿತನ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ತಿರುಗಿ ಬಿದ್ದಿದ್ದಾರೆ. ಮಡಾಳ್ ನ್ನನು ಹುಡುಕಿಸುತ್ತಿದ್ದಾರೋ ಅಥವಾ ಬಿಜೆಪಿಯವರೆ ಅವರನ್ನು ಬಚ್ಚಿಟ್ಟಿದ್ದಾರೆ ಎಂಬ ಅನುಮಾನವನ್ನು ಕಾಂಗ್ರೆಸ್ ನಾಯಕರು ಹೊರ ಹಾಕಿದ್ದಾರೆ.  ಇವರಿಗೆ ಹುಡುಕಲು ಎಷ್ಟು ದಿನ ಬೇಕು .ತಾವಾಗಿಯೆ ಅವರನ್ನು ತಲೆಮರೆಸಿಕೊಳ್ಳುವಂತೆ ಮಾಡಿದ್ದಾರೆ. ಹುಡುಕಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಈಗ ಕಾಂಗ್ರೆಸ್ ನವರಿಗೆ ಇದು ಬಿಜೆಪಿಯನ್ನು ಮಣಿಸಲು ಇನ್ನೊಂದು ಅಸ್ತ್ರವಾಗಿದ್ದು ,ಇದನ್ನೆ ಬಂಡವಾಳವಾಗಿ ಮಾಡಿಕೊಂಡು ಪೋಸ್ಟರ್ ಪ್ರಿಂಟ್  ಹಾಕಿಸಿ ಪ್ರತಿ ಗೋಡೆಯ ಮೇಲು ಪ್ರತಿ ಅಂಟಿಸುವ ಅಭಿಯಾನವನ್ನು ‘ಕೈ ‘ನಾಯಕರು ಕೈಗೊಂಡಿದ್ದಾರೆ.

ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..

ಲಂಡನ್ನ ನ ಬಸವೇಶ್ವರ ಪ್ರತಿಮೆಗೆ ನಮಸ್ಕರಿಸಿದ ರಾಹುಲ್ ಗಾಂಧಿ

ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ2

 

About The Author