ಫಲಿತಾಂಶಕ್ಕೆ ಕ್ಷಣಗಣನೆ- ತಾಯಿ ಜೊತೆ ನಿಖಿಲ್ ಟೆಂಪಲ್ ರನ್

ಲೋಕಸಭಾ ಮಹಾಸಮರದ ತೀರ್ಪು ನಾಳೆ ಪ್ರಕಟವಾಗೋ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಈ ಮಧ್ಯೆ ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲುವಿಗಾಗಿ ತಾಯಿ ಅನಿತಾ ಕುಮಾರಸ್ವಾಮಿ ನಾನಾ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಇಂದು ಬೆಳಗ್ಗಿನಿಂದ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯ, ಮಾವಿನಕೆರೆ ಬೆಟ್ಟ ರಂಗನಾಥ ಸ್ವಾಮಿ ದೇಗುಲ, ದೇವೇಗೌಡರ ಹುಟ್ಟೂರು ಹರದನಹಳ್ಳಿಯ ಈಶ್ವರ ದೇವಸ್ಥಾನ, ಯಲಿಯೂರು ದೇವೀರಮ್ಮ ದೇವಸ್ಥಾನ, ಆನೇಕೆರೆ ದೇವಾಲಯ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಿ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದ್ರು.

ನಾಳೆ ಸಂಜೆವರೆಗೂ ಮಾತ್ರ ಕುಮಾರಸ್ವಾಮಿ ಹವಾ ಅಂತೆ. ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ತಪ್ಪದೇ ನೋಡಿ.

https://www.youtube.com/watch?v=Zx15eOcecDQ

About The Author