Saturday, August 9, 2025

Latest Posts

ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubballi Political News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಗಾಳಿಪಟ ಉತ್ಸವದಲ್ಲಿ ಮೋದಿಯವರನ್ನು ಹಾಡಿ ಹೊಗಳಿದರು. ಭಾರತ ದೇಶವನ್ನು ಬಲಿಷ್ಠ ಮಾಡಲು ನಾವು ಸಂಕಲ್ಪ ಮಾಡಬೇಕು. ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ ಎಂದು ಜೋಶಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ..

ಒಂದು ಕಾಲದಲ್ಲಿ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಆದರೆ ಇಂದು ಭಯೋತ್ಪಾದಕರನ್ನು ಹುಡುಕಿ ಹೊಡೆಯುವ ಕೆಲಸವಾಗಿದೆ. ದೇಶದಲ್ಲಿ ಶಾಂತಿ ಇರುವ ಕಾರಣಕ್ಕೆ ರಾಮಮಂದಿರ ನಿರ್ಮಾಣವಾಗಿದೆ. ಭಾರತ ದೇಶವನ್ನು ಬಲಿಷ್ಠ ಮಾಡಲು ನಾವು ಸಂಕಲ್ಪ ಮಾಡಬೇಕು. ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ. ತೀಸ್ರೀ ಬಾರ್ ಮೋದಿ ಸರ್ಕಾರ ಬರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಗಾಳಿಪಟ ಉತ್ಸವದಲ್ಲಿ ಮೋದಿಯವರನ್ನು ಹಾಡಿ ಹೊಗಳಿದರು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ ಜೋಶಿ ಪುತ್ರಿ ಅರ್ಪಿತಾ ಜೋಶಿ ಎಲ್ಲರ ಗಮನ ಸೆಳೆದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ಸಂಚಿತ್ ಹೆಗಡೆ ಕೂಡ ಭಾಗಿಯಾಗಿದ್ದರು. ಇನ್ನು ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಅರ್ಪಿತಾ ಜೋಶಿ ಅವರು ಹಾಡು ಹಾಡಿ ಜನರನ್ನು ರಂಜಿಸಿದರು. ಮತ್ತೊಂದೆಡೆ ಗಾಳಿಪಟ ಉತ್ಸವದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ. ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್ ಉಪಸ್ಥಿತರಿದ್ದರು.

ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ
ಇನ್ನು ಗಾಳಿಪಟ ಉತ್ಸವದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳು ಎಂದು ಮಾತು ಆರಂಭಿಸಿದರು. ಮೋದಿ ಹೆಸರು ಹೇಳುತ್ತಿದ್ದಂತೆ ಜನರೆಲ್ಲ ಮೋದಿ ಮೋದಿ ಎಂದು ಕೂಗಿ ಸಂಭ್ರಮಿಸಿದ್ರು. 500 ವರ್ಷಗಳ ದಾಸ್ಯದ ಕಳಂಕ ತೊರೆದು ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ಮೋದಿಯವರು ಕ್ರೀಡಾ ಉತ್ಸವ, ಸಾಂಸ್ಕೃತಿಕ ಉತ್ಸವ ಮಾಡಲು ಕರೆ ಕೊಟ್ಟಿದ್ದಾರೆ. ಮೋದಿಯವರ ಆಡಳಿತದಲ್ಲಿ ದೇಶ ಬಲಿಷ್ಠವಾಗಿದೆ.

ಒಂದು ಕಾಲದಲ್ಲಿ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಆದರೆ ಇಂದು ಭಯೋತ್ಪಾದಕರನ್ನು ಹುಡುಕಿ ಹೊಡೆಯುವ ಕೆಲಸವಾಗಿದೆ. ದೇಶದಲ್ಲಿ ಶಾಂತಿ ಇರುವ ಕಾರಣಕ್ಕೆ ರಾಮಮಂದಿರ ನಿರ್ಮಾಣವಾಗಿದೆ. ಭಾರತ ದೇಶವನ್ನು ಬಲಿಷ್ಠ ಮಾಡಲು ನಾವು ಸಂಕಲ್ಪ ಮಾಡಬೇಕು. ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ. ತೀಸ್ರೀ ಬಾರ್ ಮೋದಿ ಸರ್ಕಾರ ಬರಬೇಕು. ನೀವೇ ಜನತಾ ಜನಾರ್ದನ, ಶ್ರೀಮನ್ನಾರಾಯಣ, ಪಾಂಡುರಂಗ ಎನ್ನುವ ಮೂಲಕ ಗಾಳಿಪಟ ಉತ್ಸವದಲ್ಲಿ ನೆರೆದಿದ್ದವರನ್ನು ಜೋಶಿ ಹಾಡಿಹೊಗಳಿದರು.

ಗಾಳಿಪಟ ಉತ್ಸವದಲ್ಲಿ ಜೋಶಿ ಪರ ಅರವಿಂದ ಬೆಲ್ಲದ್ ಬ್ಯಾಟಿಂಗ್

ಇದೇ ವೇಳೆ ಮಾತನಾಡಿದ ಅರವಿಂದ ಬೆಲ್ಲದ್, 3ನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು. ಮೋದಿ ಪ್ರಧಾನಿ ಆಗಬೇಕಾದರೆ ಜೋಶಿ 5ನೇ ಬಾರಿಗೆ ಗೆಲ್ಲಬೇಕು ಎನ್ನುವ ಮೂಲಕ ಗಾಳಿಪಟ ಉತ್ಸವದಲ್ಲಿ ಜೋಶಿ ಪರ ಅರವಿಂದ ಬೆಲ್ಲದ್ ಬ್ಯಾಟಿಂಗ್ ಮಾಡಿದ್ದಾರೆ. ನೀವೆಲ್ಲರೂ ಒಂದು ಸಾವಿರ ಜನರಿಂದ ಜೋಶಿಗೆ ಮತ ಹಾಕಿಸಬೇಕು. ದೇಶದ ಸಮೃದ್ಧಿ ಆಗಬೇಕು ಅಂದರೆ ಮತ್ತೊಮ್ಮೆ ಮೋದಿ ಬರಬೇಕು. ಇದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಜಗದೀಶ್ ಶೆಟ್ಟರ್ ಘರ್ವಾಪ್ಸಿಗೆ ಟಾಂಗ್ ಕೊಟ್ಟ ಮಹೇಶ ಟೆಂಗಿನಕಾಯಿ

ಗಾಳಿಪಟ ಉತ್ಸವದಲ್ಲಿ ಹುಬ್ಬಳ್ಳಿ-ಧಾರವಾರ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಜಗದೀಶ್ ಶೆಟ್ಟರ್ ಘರ್ವಾಪ್ಸಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಯಾರೋ ಒಬ್ಬರು 10 ಕೋಟಿ ಅನುದಾನದ ಬಗ್ಗೆ ಮಾತಾಡಿದ್ದರು. ಆದರೆ ನನಗೆ 150 ಕೊಡ್ತೀನಿ ಅಂದಿದ್ದಾರೆ ಎಂದರು.

ಕೆಲ ದಿನಗಳ ಹಿಂದೆ ಅನುದಾನ ವಿಚಾರವಾಗಿ ಟಾಕ್ ಫೈಟ್ ನಡೆದಿತ್ತು. ಶೆಟ್ಟರ್, ಮಹೇಶ್ ಟೆಂಗಿನಕಾಯಿ ನಡುವೆ ಟಾಕ್ ಫೈಟ್ ನಡೆದಿತ್ತು. ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾದರೂ ಟೆಂಗಿನಕಾಯಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಮೋದಿ ಹೇಗೆ ದೇಶ ಅಭಿವೃದ್ಧಿ ಮಾಡಿದ್ದಾರೋ ಹಾಗೆ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಜೋಶಿ ಅವರನ್ನು ಮಹೇಶ್ ಟೆಂಗಿನಕಾಯಿ ಹಾಡಿಹೊಗಳಿದರು.

ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಬಂದು ನಟಿಯರೊಂದಿಗೆ ಪಾರ್ಟಿ ಮಾಡಿದ Vicky Jain

ಜೋಶಿನೇ ನಮ್ಮ ನಾಯಕ. ಅವರಿಗೇ ಈ ಬಾರಿ ಲೋಕಸಭೆ ಟಿಕೇಟ್ ಸಿಗಬೇಕು: ಶಾಸಕ ಬೆಲ್ಲದ್

ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ದಾಖಲೆ ಬರೆದ ರೋಹನ್ ಬೋಪಣ್ಣ

- Advertisement -

Latest Posts

Don't Miss