Monday, December 23, 2024

Latest Posts

ಮಗುವಿನ ಜೀವ ಉಳಿಸು ಎಂದು ಶಿಲುಬೆ ಮುಂದೆ ಮಲಗಿಸಿದ ದಂಪತಿ!

- Advertisement -

ಬೆಳಗಾವಿ: ಮಗುವಿನ ಜೀವ ಉಳಿಸು ಎಂದು ದಂಪತಿ ತಮ್ಮ ಏಳೂವರೆ ವರ್ಷ ವಯಸ್ಸಿನ ಬಾಲಕನನ್ನು ಶಿಲುಬೆ ಎದುರು ಮಲಗಿಸಿ ಪ್ರಾರ್ಥಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

ಪ್ಲೇಗ್ ರೋಗ ಭಾರತವನ್ನು ವಕ್ಕರಿಸಿದ್ದ ಸಂದರ್ಭದಲ್ಲಿ ಅಂದಿನ ಪಾದ್ರಿಯೊಬ್ಬರು ನಂದಗಡ ಬೆಟ್ಟದಲ್ಲಿರುವ ಶಿಲುಬೆ ಮುಂದೆ ಪ್ರಾರ್ಥನೆ ಸಲ್ಲಿಸಿ, ಬಳಿಕ ರೋಗಿಗಳ ಆರೈಕೆ ಮಾಡಿದ್ದರು. ಅವರ ಪ್ರಾರ್ಥನೆ ಫಲಿಸಿ, ಹಲವರು ಪ್ಲೇಗ್ ನಿಂದ ಗುಣಮುಖಗೊಂಡಿದ್ದರು ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದೆ. ಹಾಗಾಗಿ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಮಗನನ್ನು ಶಿಲುಬೆ ಮುಂದೆ ಮಲಗಿಸಿ ದಂಪತಿಗಳು ಪ್ರಾರ್ಥಿಸಿದ್ದಾರೆ.

ಉತ್ತರ ಕನ್ನಡ ಮೂಲದ ದಂಪತಿಯ ಏಳೂವರೆ ವರ್ಷ ವಯಸ್ಸಿನ ಶೈಲೇಶ್, ಕಳೆದ ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ. ವೈದ್ಯರ ಬಳಿಗೆ ಹೋಗಿ ಪರೀಕ್ಷೆ ನಡೆಸಿದ ವೇಳೆ ಬಾಲಕನಿಗೆ ಮೆದುಳು ಜ್ವರ ಇರುವುದು ಗೊತ್ತಾಗಿದೆ. ಕೂಲಿ ಕಾರ್ಮಿಕರಾಗಿರುವ ದಂಪತಿ ಮಗುವನ್ನು ಉಳಿಸಿಕೊಳ್ಳಲು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದರೆ ಬಾಲಕ ಇನ್ನು ಬದುಕುವುದಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದಾರೆ.

ಎಲ್ಲ ನಂಬಿಕೆಗಳು ಕೈಚೆಲ್ಲಿ ಹೋದ ನಂತರ ದಂಪತಿ ಕಣ್ಣೀರು ಹಾಕುತ್ತಾ, ಶೈಲೇಶ್ ನನ್ನು ಶಿಲುಬೆ ಮುಂದೆ ಮಲಗಿಸಿ, ಅಸಹಾಯಕತೆಯಿಂದ ಪ್ರಾರ್ಥಿಸಿ, ಮಗನ ಜೀವ ಉಳಿಸುವಂತೆ ಬೇಡಿಕೊಂಡಿದ್ದಾರೆ.

- Advertisement -

Latest Posts

Don't Miss