Hassan News: ಹಾಸನ : ಮನೆಯಲ್ಲಿ ದಂಪತಿ ಸಾವಿಗೀಡಾದ ಘಟನೆ, ಹಾಸನದಲ್ಲಿ ನಡೆದಿದೆ. ಹಾಸನದ ಕೆ.ಹೊಸಕೊಪ್ಪಲಿನಲ್ಲಿ ಈ ಘಟನೆ ನಡೆದಿದ್ದು, ದೇವರಾಜು (43), ಮಂಜುಳಾ 35) ಮೃತ ದಂಪತಿಯಾಗಿದ್ದಾರೆ.
ಪತ್ನಿ ಕೊಂದು ಪತಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯುಂಟಾಗಿದೆ. ಮೃತ ದಂಪತಿ ಹೊಳೆನರಸೀಪುರ ತಾಲ್ಲೂಕು ಮೂಲದವರಾಗಿದ್ದು, ಕಳೆದ ಮೂರು ತಿಂಗಳಿನಿಂದ ಕೆ.ಹೊಸಕೊಪ್ಪಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ದಂಪತಿ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದರು.
ಈ ಮೊದಲು ಇವರಿಬ್ಬರು ಬೆಂಗಳೂರಿನಲ್ಲಿ ವಾಸವಿದ್ದರು. ಬಳಿಕ ಹಾಸನಕ್ಕೆ ಬಂದಿದ್ದರು. ಕಳೆದ ಸೋಮವಾರದಿಂದ ದಂಪತಿ ಮನೆಯಿಂದ ಹೊರಗಡೆ ಬಂದೇ ಇರಲಿಲ್ಲವಂತೆ. ಆದರೆ ಇಂದು ಮನೆಯಿಂದ ದುರ್ನಾತ ಬಂದಾಗ, ಮನೆಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಬೀಗ ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ದೇವರಾಜು ಶವ ಪತ್ತೆಯಾಗಿದೆ. ಮಂಚದ ಮೇಲೆ ಪತ್ನಿ ಮಂಜುಳಾ ಮೃತದೇಹವಿತ್ತು. ಸೋಮವಾರದಿಂದ ಇವರಿಬ್ಬರು ಹೊರಗೆ ಬಾರದ ಕಾರಣ, ಅಂದೇ ಅವರಿಬ್ಬರು ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ. ಇಬ್ಬರ ದೇಹವೂ ಕೊಳೆತಿದ್ದ ಕಾರಣ ದುರ್ನಾತ ಬರುತ್ತಿತ್ತು. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
3 ಲಕ್ಷ ಲೀಡ್ ನಿಂದ ಗೆಲ್ತಿನಿ: ಶೆಟ್ಟರ್ ಟಿಕೆಟ್ ತಪ್ಪಿಸುವ ತಂತ್ರ ಮಾಡಿಲ್ಲ ಎಂದ ಕೇಂದ್ರ ಸಚಿವ ಜೋಶಿ..!
ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್: ಹಿಂದೂ ಹುಲಿ ಪ್ರಮೋದ್ ಮುತಾಲಿಕ್ ಆಕ್ರೋಶ.
ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ. ದೇಶಕ್ಕಾಗಿ, ಮೋದಿಗಾಗಿ: ಸಂಸದ ಪ್ರತಾಪ್ ಸಿಂಹ




