Thursday, December 12, 2024

Latest Posts

ಕರ್ನಾಟಕದಲ್ಲಿ ಕೋವಿಡ್ ರಣಕೇಕೆ

- Advertisement -

ಕರ್ನಾಟಕದಲ್ಲಿ ಸರ್ಕಾರ ಕೋವಿಡ್-19 ಕಟ್ಟಿಹಾಕಲು ಎಷ್ಟೇ ಕಸರತ್ತನ್ನು ಮಾಡಿದರೂ ಸಹ, ಕೊರೋನಾ ದಿನದಿಂದ ದಿನಕ್ಕೆ ಡಬಲ್ ಆಗಿದೆ. ಇನ್ನು ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆ ಸರ್ಕಾರ ಹರಸಾಹಸ ಪಡುತ್ತಿದೆ. ಈಗಾಗಿ ಕರ್ನಾಟಕದಲ್ಲಿ ಇಂದಿನ ಪಾಸಿಟಿವಿಟಿ ದರ ಶೇಖಡ 3.33 ರಷ್ಟಕ್ಕೆ ಏರಿದೆ.
ಹೌದು ಕೊರೊನಾ ನೆನ್ನೆಗಿಂತ ಇಂದು ಡಬಲ್ ಆಗಿದೆ, ಕಳೆದ 24 ಗಂಟೆಯಲ್ಲಿ 4246 ಪ್ರಕರಣಗಳು ದಾಖಲಾಗಿವೆ. ಇನ್ನು ಕೊರೊನಾ ಹಾಟ್‌ಸ್ಪಾಟ್ ಆಗುತ್ತಿರುವ ಬೆಂಗಳೂರಿನಲ್ಲಿ ಇಂದು ಒಂದೇ ದಿನ 3605 ಜನರಿಗೆ ಸೋಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಖಡ 3.33 ರಷ್ಟಕ್ಕೆ ಏರಿದೆ. ಕೊರೊನಾ ಜೊತೆಗೆ ಇದರ ರೂಪಾಂತರಿ ವೈರಸ್ ಒಮಿಕ್ರಾನ್ ಸಹ ಎಲ್ಲೆಡೆತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬರುತ್ತಿದೆ. ಇದುವರೆಗೆ 226 ಜನರಿಗೆ ಸೋಂಕು ಪತ್ತೆಯಾಗಿದೆ ಎಂದು ಟ್ವೀಟರ್‌ನಲ್ಲಿ ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.

- Advertisement -

Latest Posts

Don't Miss