Dharwad News: ಧಾರವಾಡ: ಬಕ್ರೀದ್ ಸಮಯದಲ್ಲಿ ಗೋ ಹತ್ಯೆ, ಗೋ ಸಾಗಾಟ ನಿಷೇಧಕ್ಕೆ ಆಗ್ರಹಿಸಿ, ಧಾರವಾಡದಲ್ಲಿ ವಿಎಚ್‌ಪಿ ಮತ್ತು ಬಜರಂಗದಳದವರು, ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಜೂನ್ 15, 16 ಮತ್ತು 17ರಂದು ಬಕ್ರೀದ್ ಇದ್ದು, ಈ ದಿನ ಕುರ್ಬಾನಿಯಾ ನೀಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಗೋ ಹತ್ಯೆ ಮತ್ತು ಅಕ್ರಮ ಗೋ ಸಾಗಾಟ ಆಗುವುದನ್ನು ತಡೆಯಬೇಕು. ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ನಿಷೇಧದ ಆದೇಶ ಪಾಲನೆಯಾಗಬೇಕು. ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಜಾರಿಯಲ್ಲಿದೆ.
ಅದರ ಜೊತೆಗೆ ಕರ್ನಾಟಕ ಪ್ರಾಲಿ ಬಲಿ ನಕಷರೆಧ 1959(ತಿದ್ದುಪಡಿ1975) ಕಾಯಿದೆಯೂ ಜಾರಿಯಲ್ಲಿದೆ. ಅದರ ಪ್ರಕಾರ ವಯಸ್ಸಿನ ಗೋವು, ದನ, ಎತ್ತು, ಹೋರಿಗಳ ವಧೆಯಾಗಬಾರದು. ಈ ಕಾಯಿದೆಯ ಪಾಲನೆ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಯಡಿಯೂರಪ್ಪ ಬಂಧನ? ಪೋಕೋ ಕೇಸ್ನಲ್ಲಿ ಬಿಎಸ್ವೈ ಬಂಧನಕ್ಕೆ ಸಿದ್ಧತೆ..!