ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೋವುಗಳಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ, ಅಷ್ಟೇ ಅಲ್ಲದೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳ ವಾಸ ವಿರುತ್ತದೆ ಎಂದು ಕೂಡ ನಂಬಿಕೆ ಇದೆ, ಇನ್ನು ಗೋವುಗಳನ್ನು ಪೂಜಿಸುವ ಪದ್ಧತಿ ನಮ್ಮಲ್ಲಿ ಹಿಂದಿನ ಕಾಲದಿಂದಲೂ ಇದೆ, ಅದರಲ್ಲೂ ಹಬ್ಬ ಹರಿದಿನಗಳಲ್ಲಿ ಕಡ್ಡಾಯವಾಗಿ ಗೋವುಗಳ ಪೂಜೆ ನಡೆಯುತ್ತದೆ. ಇನ್ನು ಸ್ಕಂದ ಪುರಾಣದ ಪ್ರಕಾರ ಗೋವುಗಳ ಪೂಜೆಯನ್ನು ಮಾಡುವುದರಿಂದ ಸಿಗುವ ಫಲಗಳ ಬಗ್ಗೆ ವಿಶೇಷವಾಗಿ ತಿಳಿಸಲಾಗಿದೆ,.ಹಾಗಾದರೆ ಗೋವುಗಳ ಪೂಜೆಯಿಂದ ಸಿಗುವ ಫಲಗಳು ಏನು ಎಂಬುವುದನ್ನು ನೋಡೋಣ. ಪುರಾಣಗಳ ಪ್ರಕಾರ ಶ್ರೀರಾಮನ ಕುಟುಂಬದ ಪೂರ್ವಜರು ಗೋವುಗಳ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದರಿಂದ ವಿಷ್ಣುವು ಇವರ ವಂಶದಲ್ಲಿ ಶ್ರೀರಾಮನಾಗಿ ಜನಿಸಿದರು ಎಂದು ಹೇಳಲಾಗುತ್ತದೆ. ಇನ್ನು ಗೋವಿಗೆ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಹಾರವನ್ನು ದಾನಮಾಡಬೇಕು, ನೀವು ಕೊಟ್ಟಂತಹ ಆಹಾರವನ್ನು ಹಸುಗಳು ತಿನ್ನುತ್ತಾ ಹೊದಂತೆ ನಿಮ್ಮ ಕರ್ಮಗಳು ಕೂಡ ಕಡಿಮೆಯಾಗುತ್ತಾ ಹೋಗುತ್ತದೆ.
ಇನ್ನು ಗೋವುಗಳಿಗೆ ನೀವು ಎಷ್ಟು ಗೌರವವನ್ನು ಕೊಡುತ್ತಿರೋ ಅಷ್ಟೇ ಗೌರವಗಳು ನಿಮಗೆ ಸಮಾಜದಲ್ಲಿ ಸಿಗುತ್ತದೆ, ಇದರ ಜೊತೆಗೆ ಪೂರ್ವ ಜನ್ಮದ ಪಾಪ ಕರ್ಮಗಳು ಕೂಡ ಕಳೆಯುತ್ತದೆ ಎಂದು ಹೇಳಲಾಗುತ್ತದೆ. ಇನ್ನು ವಿಶೇಷವಾಗಿ ಗೋವಿಗೆ ರಕ್ಷಣೆಯನ್ನು ನೀಡುವುದು, ಗೋವಿನ ಸೇವೆಯನ್ನು ಮಾಡುವುದು, ಗೋವಿಗೆ ಹುಲ್ಲು ಆಹಾರವನ್ನು ನೀಡುವುದು, ಗೋವಿನ ಕುತ್ತಿಗೆ ಮತ್ತು ಮೈ ಸವರುವುದು, ಗೋವಿನ ಪೂಜೆಯನ್ನು ಮಾಡುವುದು ಗೋವಿಗೆ ಪ್ರದಕ್ಷಿಣೆಯನ್ನು ಹಾಕುವುದನ್ನುಮಾಡುವುದರಿಂದ ಮಹಾಲಕ್ಷ್ಮಿದೇವಿ ಆಕರ್ಷಣೆ ನಿಮ್ಮತ್ತ ಸೆಳೆಯುತ್ತದೆ, ಇದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ, ಹಾಗೂ ಹಣಕಾಸಿನ ಅನುಕೂಲತೆಗಳು ಸುಖ-ಸಂಪತ್ತು ಪ್ರಾಪ್ತಿಯಾಗುತ್ತದೆ, ಅಷ್ಟೇ ಅಲ್ಲದೆ ಶನಿ ದೋಷ ಪಿತೃದೋಷ ಅನಾರೋಗ್ಯದ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ, ಗೋವು ಐಶ್ವರ್ಯ ಮತ್ತು ಮೋಕ್ಷಕ್ಕೆ ಪ್ರತೀಕ. ಗೋವನ್ನು ಸವರುವುದರಿಂದ ಎಲ್ಲಾ ಪಾಪ ಕರ್ಮದಿಂದ ಮುಕ್ತಿ ಸಿಗುತ್ತದೆ ಎಂದು ಸ್ಕಂದ ಪುರಾಣದಲ್ಲಿ ತಿಳಿಸಲಾಗಿದೆ.ಇನ್ನು ಗೋವುಗಳ ಪೂಜೆಯನ್ನು ಮಾಡುವುದರಿಂದ ಗೋವುಗಳಿಗೆ ಆಹಾರ ಪದಾರ್ಥಗಳನ್ನು ಕ್ರಮೇಣವಾಗಿ ನೀಡುವುದರಿಂದ ಸಂತಾನ ಫಲ ಪ್ರಾಪ್ತಿಯಾಗುತ್ತದೆ ಎಂದು ಸಹ ಹೇಳಲಾಗುತ್ತದೆ.