Viral Video: ಇಲ್ಲೊಂದು ವೈರಲ್ ಆಗಿರುವ ವೀಡಿಯೋದಲ್ಲಿ ಪದ್ಧತಿ ಪ್ರಕಾರವಾಗಿ ನಾಮಕರಣ ಸಮಾರಂಭ ಮಾಡಲಾಗಿದೆ. ತೊಟ್ಟಿಲಿಗೆ ಚೆಂದದ ಅಲಂಕಾರ ಮಾಡಿ, ಪುರೋಹಿತರಿಂದ ಮಂತ್ರಾದಿಗಳನ್ನು ಹೇಳಿಸಿ. ಮನೆಯ ಹೆಂಗಸರೆಲ್ಲ ಸೇರಿ, ತೊಟ್ಟಿಲು ತೂಗಿ, ಮಗುವಿನ ಕಿವಿಯಲ್ಲಿ ಹೆಸರನ್ನು ಕೂಗಿ, ಸಂಭ್ರಮದಿಂದ ನಾಮಕರಣ ಶಾಸ್ತ್ರ ಮಾಡಿದ್ದಾರೆ.
ಅರೇ ಇದೇನಪ್ಪಾ ತೊಟ್ಟಿಲಿಗೆ ಮಗುವನ್ನು ಹಾಕಿ, ನಾಮಕರಣ ಮಾಡೋದು 1 ನ್ಯೂಸಾ ಅಂತಾ ನೀವು ಕೇಳ್ಬಹುದು. ಆದ್ರೆ ಇಲ್ಲಿ ವಿಶೇಷ ಏನಪ್ಪಾ ಅಂದ್ರೆ, ಆ ಮಗು ಸಾಮಾನ್ಯವಾಗಿರುವ ಮಗು ಅಲ್ಲಾ, ಪುಟ್ಟ ಕರು. ಹೌದು, ಕರುವಿನ ನಾಮಕರಣ ಸಮಾರಂಭವನ್ನೇ ಇಷ್ಟು ಚೆಂದದಲ್ಲಿ ಮಾಡಲಾಗಿದೆ.
ಕರ್ನಾಟಕದಲ್ಲೇ ಎಲ್ಲೋ 1 ಕಡೆ ಈ ಸಮಾರಂಭ ನಡೆದಿದ್ದು, ಮನೆ ಮಂದಿ ಎಲ್ಲ ಸೇರಿ ಮಗುವಿನಂತೆ ಕರುವನ್ನು ತೊಟ್ಟಿಲಿನಲ್ಲಿ ಇರಿಸಿ, ನಾಮಕರಣ ಸಮಾರಂಭ ಮಾಡಿದ್ದಾರೆ. ಇನ್ನು ಬೇಬಿ ರಾಮಾ ಎಂದು ಈ ಮಗುವಿಗೆ ಹೆಸರನ್ನೂ ಇಟ್ಟಿದ್ದಾರೆ.
ವೀಡಿಯೋಗಾಗಿ ಈ ಲಿಂಕ್ ಪ್ರೆಸ್ ಮಾಡಿ..




