Hubballi News: ಹುಬ್ಬಳ್ಳಿ ನಗರದಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ ವೇಳೆ ಮತ್ತೊಂದು ಅವಘಡ ಸಂಭವಿಸಿದ್ದು,ಬೃಹತ್ ಕ್ರೇನ್ ವಾಹನ ಪಲ್ಟಿ ಭಾರಿ ಅನಾಹುತ ತಪ್ಪಿದೆ. ಹುಬ್ಬಳ್ಳಿಯ ಕೋರ್ಟ್ ಸರ್ಕಲ್ ನಲ್ಲಿ ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ತಂದೆ-ಮಗ ಪಾರಾಗಿದ್ದಾರೆ. ಚೆನ್ನಮ್ಮ ವೃತ್ತದಿಂದ ರೈಲ್ವೆ ಮೈದಾನದವರಿಗೆ ಫ್ಲೈ ಓವರ್ ನಿರ್ಮಾಣ ಹಿನ್ನೆಲೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳಲ್ಲಿದೆ ಕಾಮಗಾರಿ ನಡೆಸಲಾಗುತ್ತದೆ.
ರಸ್ತೆ ಸಂಚಾರವಿದ್ದರೂ ಬೃಹತ್ ಕ್ರೆನ್ ಬಳಸಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ಈ ವೇಳೆ ಏಕಾಏಕಿ ರಸ್ತೆ ಪಕ್ಕದ ವಿದ್ಯುತ್ ಕಂಬದ ಮೇಲೆ ಕ್ರೇನ್ ಉರುಳಿ ಬಿದ್ದು, ಒಂದು ಬೈಕ್ ಜಖಂ ಬೈಕ್ ನಲ್ಲಿ ಹೋಗುತ್ತಿದ್ದ ತಂದೆ- ಮಗನಿಗೆ ಸಣ್ಣಗಾಯಗಳಾಗಿವೆ. ಗುತ್ತಿಗೆದಾರನ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸಲಿ ಚಿನ್ನ ಲಪಟಾಯಿಸಿ, ನಕಲಿ ಚಿನ್ನವಿಟ್ಟು ಪರಾರಿಯಾಗಿದ್ದ ಅಟೆಂಡರ್ ಬಂಧನ
‘ಅಧಿಕಾರದಲ್ಲಿದ್ದರೂ ಪ್ರತಿಭಟಿಸುತ್ತಿರುವ ವಿಶ್ವದ ಏಕೈಕ ಪಕ್ಷ ಕಾಂಗ್ರೆಸ್ ಆಗಿರಬೇಕು’
ಇದೆಲ್ಲ ಕಾಂಗ್ರೆಸ್ ಅಗ್ಗದ ಜನಪ್ರಿಯತೆಗೆ ಮಾಡಿರುವ ಯೋಜನೆ: ಪ್ರಹ್ಲಾದ್ ಜೋಶಿ