Saturday, July 27, 2024

Latest Posts

Cricket : ಕೊಹ್ಲಿಯನ್ನೇ ಹಿಂದಿಕ್ಕಿದ ಕನ್ನಡಿಗ ಮಯಾಂಕ್ ಅಗರ್ವಾಲ್

- Advertisement -

ಟೀಮ್ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಮತ್ತೆ ಅಬ್ಬರಿಸಿದ್ದಾರೆ. ಸದ್ಯ ಭಾರತ ತಂಡದ ಎಲ್ಲಾ ಸ್ವರೂಪದಲ್ಲಿಯೂ ಸ್ಥಾನ ಕಳೆದುಕೊಂಡಿರುವ ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್‌, ಯೋ-ಯೋ ಟೆಸ್ಟ್‌ನಲ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿಯವ್ರನ್ನೇ ಮಯಾಂಕ್ ಅಗರ್ವಾಲ್ ಹಿಂದಿಕ್ಕಿದ್ದಾರೆ.

ಬುಧವಾರ ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಮಯಾಂಕ್‌ ಅಗರ್ವಾಲ್‌ ಯೋ-ಯೋ ಟೆಸ್ಟ್‌ಗೆ ಒಳಗಾಗಿದ್ದರು. ಭರ್ಜರಿಯಾಗಿ ಯೋ-ಯೋ ಟೆಸ್ಟ್‌ ಮುಗಿಸಿದ ಮಯಾಂಕ್‌ ಅಗರ್ವಾಲ್ 21.1 ಅಂಕ ಪಡೆದುಕೊಂಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವು ಪಡೆದ ಅಂಕಗಳನ್ನು ಮಯಾಂಕ್ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.

ಯೋ-ಯೋ ಟೆಸ್ಟ್‌ನಲ್ಲಿ ಭಾಗಿಯಾಗಿದ್ದ ವಿರಾಟ್‌ ಕೊಹ್ಲಿ 17.2 ಅಂಕ ಪಡೆದುಕೊಂಡಿದ್ದರು. ಕೊಹ್ಲಿಯ ಯೋ-ಯೋ ಟೆಸ್ಟ್‌ ಅಂಕಗಳ ಮಾಹಿತಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದವು. ಅದನ್ನು ಗಮನಿಸಿದ ಬಿಸಿಸಿಐ, ಯೋ-ಯೋ ಟೆಸ್ಟ್‌ ಅಂಕ ಬಹಿರಂಗಪಡಿಸಬಾರದು ಎಂದು ಆಟಗಾರರಿಗೆ ಸೂಚನೆ ನೀಡಿತ್ತು. ಇದೀಗ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾ ಆಟಗಾರರನ್ನು ಮಯಾಂಕ್‌ ಯೋ-ಯೋ ಟೆಸ್ಟ್‌ ಅಂಕಗಳಲ್ಲಿ ಹಿಂದಿಕ್ಕಿದ್ದಾರೆ.

China Bag : ಜಿ20 ಶೃಂಗಸಭೆಗೆ ಅನುಮಾನಾಸ್ಪದ ಬ್ಯಾಗ್‌ನೊಂದಿಗೆ ಆಗಮಿಸಿದ ಚೀನಾ ನಿಯೋಗ

 

Kannada; ಕರ್ನಾಟಕದಲ್ಲಿ ಮಕ್ಕಳಿಗೆ ಮಾತೃಭಾಷೆ ಕನ್ನಡ ಕಡ್ಡಾಯ: ಸಚಿವ ಮಧು ಬಂಗಾರಪ್ಪ

ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

- Advertisement -

Latest Posts

Don't Miss