sports news..
ವುಮೆನ್ ಪ್ರೀಮಿಯರ್ ಲೀಗ್ ನಲ್ಲಿ ಇಂದು ಸ್ಮೃತಿ ಮಂದನಾ ನಾಯಕತ್ವದ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ ನಡುವಣ ಆಟದಲ್ಲಿ ಬೆಂಗಳೂರು ತಂಡ 20 ಓವರ್ ಗಳಲ್ಲಿ 156 ರನ್ ಗಳಿಸಿದರೆ. ಮುಂಬೈ ಇಂಡಿಯನ್ಸ್ ತಂಡ 14.2 ಓವರ್ ಗಳಲ್ಲಿ ಒಂದು ವಿಕೇಟ್ ನಷ್ಟಕ್ಕೆ 159 ಬಾರಿಸುವ ಮೂಲಕ ಬೆಂಗಳೂರು ತಂಡಕ್ಕೆ ಸೋಲುಣಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಮುಂಬೈ ತಂಡದ ಪರ ಹೇಯ್ಲಿ ಮ್ಯಾಥ್ಯೂಸ್ ಆಲ್ ರೌಂಡರ್ ಆಟ ಪ್ರದರ್ಶಿಸಿದರು. ಬ್ಯಾಟಿಂಗ್ ವಿಭಾಗದಲ್ಲಿ ಅಜೇಯ 77 ರನ್ ಗಳಿಸಿದರೆ, ನತಾಲಿ ಸಿವರ್ ಬ್ರಂಟ್ (ಅಜೇಯ 55 ರನ್ ಗಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಆರಂಭಿಕ ಆಟಗಾರ್ತಿಯಾದ ಭಾಟಿಯಾ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಹೇಯ್ಲಿ- ನತಾಲಿ 114 ರನ್ ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದು ವಿಶೇಷವಾಗಿತ್ತು.
ಮುಂಬೈ ಇಂಡಿಯನ್ಸ್ ತಂಡಕ್ಕೆ ಇದು 2 ನೇ ಗೆಲುವಾಗಿದ್ದರೆ, ಆರ್ ಸಿಬಿ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್ ಗಳಿಂದ ಸೋಲುಕಂಡಿತ್ತು.
ಒಂದು ರೊಟ್ಟಿ , ಒಂದು ರೂಪಾಯಿ ನಾಣ್ಯ ಪಡೆದುಕೊಳ್ಳುತ್ತಿರುವ ಮೆಣಸಿನಕಾಯಿ ಅನಿಲ್
ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!