Thursday, April 17, 2025

Latest Posts

ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್

- Advertisement -

Sports News: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡಿದ್ದು, ನಿನ್ನೆ ಬರೀ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಹಲವರು, ರಾಮನಾಮ ಜಪ ಮಾಡಿ, ಭಕ್ತಿ ತೋರಿದ್ದಾರೆ. ಇನ್ನು ಹಲವರೂ ರಾಮಮಂದಿರಕ್ಕಾಗಿ ಭಾರತೀಯರಿಗೆ ಅಭಿನಂದನೆ ಕೋರಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೇಟಿಗ ಡೇವಿಡ್ ವಾಾರ್ನರ್‌, ತಮ್ಮ ಇನ್‌ಸ್ಟಾಖಾತೆಯಲ್ಲಿ ರಾಮನ ಫೋಟೋ ಹಾಕಿ, ಜೈ ಶ್ರೀರಾಮ್ ಇಂಡಿಯಾ ಎಂದು ಬರೆಯುವ ಮೂಲಕ, ಭಾರತೀಯರಿಗೆ ರಾಮಮಂದಿರಕ್ಕಾಗಿ ವಿಶ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಭಾರತೀಯರಿಗೆ ಹೆಚ್ಚು ಪ್ರೀತಿ ಪಾತ್ರವಾಗಿರುವ ವಿದೇಶಿ ಕ್ರಿಕೇಟಿಗ. ಏಕೆಂದರೆ, ಡೇವಿಡ್ ತಮ್ಮ ಕುಟುಂಬದ ಜೊತೆ ಸೇರಿ, ಹಿಂದಿ, ತಮಿಳು, ತೆಲುಗು, ಕನ್ನಡ ಹಾಡಿಗೆ ರೀಲ್ಸ್ ಮಾಡುತ್ತಿರುತ್ತಾರೆ.

ಅದರಲ್ಲೂ ಅಲ್ಲು ಅರ್ಜುನ್ ಎಂದರೆ ಬಹಳ ಇಷ್ಟಪಡುವ ವಾರ್ನರ್, ಪುಷ್ಟ ಸಿನಿಮಾದ ಎಲ್ಲ ಹಾಡುಗಳಿಗೂ ರೀಲ್ಸ್ ಮಾಡಿದ್ದಾರೆ. ಬರೀ ವಾರ್ನರ್ ಅಲ್ಲದೇ, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ಕೂಡ, ರೀಲ್ಸ್ ಮಾಡಿ, ಭಾರತೀಯರಿಗೆ ಪ್ರೀತಿಪಾತ್ರರಾಗಿದ್ದಾರೆ.

ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ

‘ಇನ್ನು ಮುಂದೆ ಅಯೋಧ್ಯೆಯಲ್ಲಿ ಫೈರಿಂಗ್ ಸದ್ದು ಕೇಳುವುದಿಲ್ಲ, ರಾಮಕೀರ್ತನೆ ಕೇಳುತ್ತದೆ’

ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ: ಸರಯೂ ದಡದಲ್ಲಿ ಗಂಗಾರತಿ

- Advertisement -

Latest Posts

Don't Miss