Friday, October 18, 2024

Latest Posts

ಸಂಸದ ಯದುವೀರ್ ಅವರನ್ನು ಭೇಟಿಯಾದ ಕ್ರಿಕೇಟಿಗ ಯಜುವೇಂದ್ರ ಚಹಲ್

- Advertisement -

Cricket News: ಮೈಸೂರಿನಲ್ಲಿ ಕ್ರಿಕೇಟಿಗ ಯಜುವೇಂದ್ರ ಚಹಲ್, ಯುವರಾಜ ಯದುವೀರ್ ಒಡೆಯರ್ ಅವರನ್ನು ಭೇಟಿಯಾಗಿದ್ದಾರೆ. ದಸರಾಗೂ ಮುನ್ನ ಮೈಸೂರಿಗೆ ಭೇಟಿ ನೀಡಿದ್ದ ಚಹಲ್, ಯುದುವೀರ್ ಅವರ ಮೈಸೂರಿನ ಕಚೇರಿಯಲ್ಲಿ ಭೇಟಿ ಮಾಡಿ, ಮಾತನಾಡಿದ್ದಾರೆ.

ಈ ಬಗ್ಗೆ ಯದುವೀರ್ ಭಾರತೀಯ ಕ್ರಿಕೇಟಿಗ ಯಜುವೇಂದ್ರ ಚಹಲ್ ಅವರು ಇಂದು ನಮ್ಮ ಕಚೇರಿಯಲ್ಲಿ ಭೇಟಿಯಾದರು ಎಂದು ಬರೆದುಕೊಂಡಿದ್ದಾರೆ. ಅದರಂತೆ ಚಹಲ್ ಕೂಡ ಪೋಸ್ಟ್ ಮಾಡಿದ್ದು, ಮೈಸೂರಿನ ಔನತ್ಯ ಯುದುವೀರ್ ಒಡೆಯರ್‌ ಅವರನ್ನು ಭೇಟಿಯಾದ ಗೌರವಾನ್ವಿತ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಈ ಮೊದಲು ಐಪಿಎಲ್‌ನಲ್ಲಿ ಆರ್‌ಸಿಬಿ ಟೀಂನಲ್ಲಿ ಇದ್ದ ಯಜುವೇಂದ್ರ ಚಹಲ್ ಅವರು, ಇದೀಗ ರಾಜಸ್ತಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಯಜುವೇಂದ್ರ ಬರೀ ಕ್ರಿಕೇಟ್ ಮಾತ್ರವಲ್ಲದೇ, ಚೆಸ್‌ನಲ್ಲಿಯೂ ಉತ್ತಮ ಆಟಗಾರರು ಎನ್ನಿಸಿಕೊಂಡಿದ್ದಾರೆ.

- Advertisement -

Latest Posts

Don't Miss