special news :
ನಿನ್ನೆಯಿಂದ ಐಪಿಎಲ್ 16 ಸರಣಿ ಆರಂಭವಾಗಿದ್ದು ಬೆಂಗಳೂರಿನಲ್ಲಿಯೂ ಸಹ ಮುಂದುವರಿದ ಪಂದ್ಯಗಳು ನಡೆಯುತ್ತದೆ. ವಿಶೇಷವೆಂದರೆ ಐಪಿಎಲ್ ಆಟ ಶುರುವಾಗುವುದರಿಂದ ಪಂದ್ಯ ಮುಕ್ತಾಯವಾಗುವುದು ರಾತ್ರಿ ತಡವಾಗುತ್ತದೆ. ರಾತ್ರಿ ವೇಳೆ ಕ್ರಿಕೆಟ್ ಅಭಿಮಾನಿಗಳು ಪಂದ್ಯ ಮುಗಿದ ನಂತರ ಮನೆಗಳಿಗೆ ತೆರಳಲು ಪರದಾಡುತಿದ್ದರು.
ಹಾಗಾಗಿ ಕ್ರೀಢಾಭಿಮಾನಿಗಳು ಸಂಚಾರ ಮಾಡಲು ತೊಂದರೆ ಪಡಬಾರದು ಎನ್ನುವ ದೃಷ್ಠಿಯಿಂದ ಬೆಂಗಳೂರು ನಮ್ಮ ಮೆಟ್ರೋ ಸಂಸ್ಥೇಯವರು ಅಭಿಮಾನಿಗಳಿಗೆ ಸಂತಸದ ಸುದ್ದಿ ತಿಳಿಸಿದ್ದಾರೆ. ಅದೇನೆಂದರೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುವ ದಿನದಂದು ತಡರಾತ್ರಿ 1.30 ರ ವರೆಗೆ ಮೆಟ್ರೋ ರೈಲು ಸಂಚರಿಸಲಿವೆ. ಏಪ್ರೀಲ್ 2.10.17 ಹಾಗೂ 26 ರಂದು ಬೆಂಗಳೂರಿನಲ್ಲಿ ಪಂದ್ಯ ನಡೆಯುವ ದಿನದಂದು ಕೆಂಪೇಗೌಡ ನಿಲ್ಧಾಣದಿಂದ ನಾಲ್ಕು ದಿಕ್ಕುಗಳಲ್ಲಿ ರಾತ್ರಿ 1.30 ರ ವರೆಗೆ ಸಂಚರಿಸಲಿವೆ. ಇದರಿಂದ ಬೇರೆ ಬೇರೆ ಕಡೆಗಳಿಂದ ಪಂದ್ಯ ನೋಡಲು ಬರುವ ಅಭಿಮಾನಿಗಳಿಗೆ ಅನುಕೂಲವಾಗಲಿದೆ ಎಂದು ಮೆಟ್ರೋ ರೈಲು ನಿಗಮ ತಿಳಿಸಿದೆ.
ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರಿಗೆ ಬೆದರಿಕೆ ನೀಡುತಿದ್ದಾರೆ ಎಂದು ಆರೋಪ ಮಾಡುತ್ತಿರುವ ಜೆಡಿಎಸ್ ನ ಮುನೇಗೌಡರು