Crime News: ರಾಜ್ಯ ಸರ್ಕಾರದ ಬೆಲೆ ಏರಿಕೆ ಹಾಗೂ ಕಾನೂನು ಸುವ್ಯವಸ್ಥೆಯ ವಿರುದ್ಧ ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಇದೀಗ ಇಡೀ ಬೆಂಗಳೂರೇ ಬೆಚ್ಚಿ ಬಿದ್ದಿದೆ. ತನ್ನ ಅಣ್ಣನೊಂದಿಗೆ ರೈಲ್ವೈ ನಿಲ್ದಾಣದಿಂದ ಬೈಕ್‌ನಲ್ಲಿ ಹೊರಟಿದ್ದ ವೇಳೆ ಯುವತಿಯೊಬ್ಬಳನ್ನು ಅಪಹರಣ ಮಾಡಿ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಯುವತಿಯ ಅಣ್ಣನ ಮೇಲೂ ದುರ್ಷರ್ಮಿಗಳು ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ. ಅಲ್ಲದೆ ಬುಧವಾರ ಈ ಯುವತಿಯು ಕೇರಳದ ಎರ್ನಾಕುಲಂನಿಂದ ಕೆ.ಆರ್.ಪುರ ರೈಲ್ವೈ ಸ್ಟೇಷನ್‌ಗೆ ಬಂದಿಳಿದಿದ್ದಳು. ತನ್ನ ಅಣ್ಣ ಹೇಳಿದಂತೆ ಅವಳು ಬಂದ ಬಳಿಕ ತಾನು ಬೆಂಗಳೂರು ತಲುಪಿರುವುದಾಗಿ ತನ್ನ ದೊಡ್ಡಮ್ಮನ ಮನೆಗೆ ಪೋನ್ ಮಾಡಿ ತಿಳಿಸಿದ್ದಾಳೆ. ನಂತರ ಅಣ್ಣನೊಂದಿಗೆ ಬೈಕ್ ನಲ್ಲಿ ಊಟಕ್ಕೆಂದು ತೆರಳುತ್ತಿದ್ದಾಗ ಇಬ್ಬರು ಅಪರಿಚಿತ ಯುವಕರು ಬೈಕ್ ಅಡ್ಡಗಟ್ಟಿದ್ದಾರೆ. ಬಳಿಕ ಯುವತಿಯ ಅಣ್ಣನ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ.
ಅಲ್ಲದೆ ಅಣ್ಣ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆಯೇ ಯುವತಿಯನ್ನು ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿದ್ದ ದುರುಳರು ಅತ್ಯಾಚಾರ ನಡೆಸಿದ್ದಾರೆ. ಇನ್ನೂ ಈ ವೇಳೆ ಯುವತಿಯ ಕಿರುಚಾಟ ಕೇಳಿಸಿಕೊಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೆ ಚೀತಾ ವಾಹನದಲ್ಲಿ ರೌಂಡ್ಸ್‌ನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತಡರಾತ್ರಿಯಲ್ಲೇ ಒಬ್ಬ ಆರೋಪಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಹದೇವಪುರ ಪೊಲೀಸರು ದೂರು ದಾಖಲಿಸಿಕೊಂಡು ಆಶಿಫ್ ಎಂಬಾತ ಸೇರಿದಂತೆ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಅಂದಹಾಗೆ ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅದೆಷ್ಟೋ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದರೂ ಈ ರೀತಿಯ ದುಷ್ಕರ್ತ್ಯಗಳು ಮಾತ್ರ ನಿಲ್ಲುತ್ತಿಲ್ಲ. ಇನ್ನೂ ಮಹಿಳಾ ಸುರಕ್ಷತೆಯ ಬಗ್ಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾಗಿ ಹೇಳುತ್ತಿರುವ ರಾಜ್ಯ ಸರ್ಕಾರದ ಕ್ರಮಗಳ ಕುರಿತು ಇದೀಗ ಪ್ರಶ್ನೆ ಮೂಡುವಂತಾಗಿದೆ. ಅಲ್ಲದೆ ಈ ಘಟನೆಯು ಪೋಷಕರಲ್ಲಿ ಆತಂಕಕ್ಕೆ ಕಾರಣವಾದರೆ, ಬೆಂಗಳೂರು ನಗರದಲ್ಲಿ ಮಹಿಳೆಯರ ಭದ್ರತೆಯ ಬಗ್ಗೆ ಮತ್ತಷ್ಟು ಯೋಚಿಸುವಂತೆಯೂ ಮಾಡಿದೆ.