ಮುಂಬೈ:ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರೀ ಮುಖಭಂಗ ಅನುಭವಿಸಿದೆ. ಇದುವರೆಗೂ ಚೆನ್ನೈ ಸತತ ಮೂರು ಪಂದ್ಯಗಳನ್ನು ಸೋತಿರಲಿಲ್ಲ.
ಚೆನ್ನೈ ತಂಡದ ಸೋಲಿಗೆ ಹಲವಾರು ಕಾರಣಗಳಿವೆ. ಆದರೆ ತಂಡದ ಹೊಸ ನಾಯಕ ರವೀಂದ್ರ ಜಡೇಜಾ ಬೇಸರದಿಂದ ಸೋಲನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಆ ಆಟಗಾರ ಇರಬೇಕಿತ್ತು ಅಂತಾ ಜಪ ಮಾಡಿದ್ದಾರೆ. ಹಾಗಾದ್ರೆ ಆ ಆಟಗಾರ ಯಾರೂಂತ ನೋಡೋದಾದ್ರೆ. ಆತ ಬೇರೆ ಯಾರೂ ಅಲ್ಲ ದೀಪಕ್ ಚಾಹರ್. ದೀಪಕ್ ಚಾಹರ್ ಹ್ಯಾಮ್ ಸ್ಟ್ರಿಂಗ್ ಇಂಜುರಿಯಿದಾಗಿ ಐಪಿಎಲ್‍ನ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದಾರೆ.
ಮೊದಲಿಗೆ ಪಂದ್ಯದ ಸೋಲಿನ ಕುರಿತು, ನಾವು ಪವರ್‍ಪ್ಲೇನಲ್ಲಿ ಸಾಕಷ್ಟು ವಿಕೆಟ್‍ಗಳನ್ನ ಕಳೆದುಕೊಂಡೆವು. ಮೊದಲ ಎಸೆತದಿಂದಲೇ ಹಿಡಿತ ಸಾಧಿಸುವಲ್ಲಿ ವಿಫಲರಾದೆವು.ಬಲಿಷ್ಠವಾಗಿ ಕಮ್‍ಬ್ಯಾಕ್ ಮಾಡಬೇಕಿದೆ. ಓಪನರ್ ಋತುರಾಜ್ ಗಾಯಕ್ವಾಡ್‍ಗೆ ಆತ್ಮವಿಶ್ವಾಸ ತುಂಬ ಬೇಕಿದೆ ಎಂದಿದ್ದಾರೆ.
ವೇಗಿ ದೀಪಕ್ ಚಾಹರ್ ಅನುಪಸ್ಥಿತಿ ಕುರಿತು, ಪವರ್ ಪ್ಲೇನಲ್ಲಿ ವಿಕೆಟ್ ಕಬಳಿಸುವುದು ತುಂಬ ಮುಖ್ಯ. ಈ ಹಂತದಲ್ಲಿ ಬೌಲರ್‍ಗಳು 2-3 ವಿಕೆಟ್ ಪಡೆಯಬೇಕು. ದೀಪಕ್ ಚಾಹರ್ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ದೀಪಕ್ ಚಾಹರ್ ಇರಬೇಕಿತ್ತು. ಚಾಹರ್ ಸೇರಿಕೊಂಡರೆ ತಂಡ ಬಲಿಷ್ಠವಾಗತ್ತದೆ ಎಂದಿದ್ದಾರೆ.