Cricket News: ಇಷ್ಟು ವರ್ಷಗಳ ಕಾಲ ಕನ್ನಡಿಗರು, ಈ ಸಲ ಕಪ್ ನಮ್ದೇ ಅಂತಾ ಹೇಳಿದ್ದರೂ, ಒಮ್ಮೆಯೂ ಪುರುಷರ ಆರ್‌ಸಿಬಿ ತಂಡ, ಟ್ರೋಫಿ ವಿನ್ ಆಗಲು ಸಾಧ್ಯವಾಗಿಲ್ಲ. ಆದರೂ ಕೂಡ ನಮ್ಮ ಸಪೋರ್ಟ್ ಸದಾ ಆರ್‌ಸಿಬಿಗೆ ಅಂತಿದ್ರು ಕನ್ನಡಿಗರು. ಆದರೆ ಮೊದಲ ಬಾರಿ ಆರ್‌ಸಿಬಿ ತಂಡದ ಮಹಿಳಾಮಣಿಗಳು, ಕರ್ನಾಟಕಕ್ಕೆ ಕಪ್ ತಂದು ಕೊಟ್ಟು, ಮೊದಲ ಬಾರಿ ಕಪ್ ನಮ್ಮದೇ ಅನ್ನೋ ಸಂಭ್ರಮವನ್ನು ತಂದುಕೊಟ್ಟಿದ್ದಾರೆ.
17 ವರ್ಷಗಳ ಕಾಲ ಆರ್‌ಸಿಬಿ ಫ್ಯಾನ್ಸ್ ಆಗಿರುವ ಕನ್ನಡಿಗರು, ಈ ಸಲ ಕಪ್ ನಮ್ಮದೇ ಆಗತ್ತೆ ಅಂತಾ ಕಾತುರದಿಂದ ಕಾಯುತ್ತಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಹಾಗಂತ ಯಾವತ್ತೂ ಆರ್‌ಸಿಬಿ ಬಿಟ್ಟು ಬೇರೆ ಗುಂಪನ್ನು ಸಪೋರ್ಟ್ ಮಾಡಿದವರೇ ಅಲ್ಲ. ಇದೇ ಕಾತುರಕ್ಕೆ ಇಂದು ಮಹಿಳಾ ಕ್ರಿಕೇಟ್ ಪಟುಗಳು ಬ್ರೇಕ್ ಹಾಕಿ, ಕಪ್ ತಂದು ಕೊಟ್ಟಿದ್ದಾರೆ.
WPL ಎರಡನೇ ಆವೃತ್ತಿಯಲ್ಲೇ ಆರ್‌ಸಿಬಿ ಮಹಿಳೆಯರು ಈ ಸಾಧನೆ ಮಾಡಿದ್ದು, ಪುರುಷ ಆಟಗಾರರನ್ನು ಮೀರಿಸಿದ್ದಂತೂ ನಿಜ. ಕೆಲ ಪಂದ್ಯಗಳಲ್ಲಿ ಸೋತಾಗ, ಆಟ ಕೈ ಬಿಟ್ಟು ಹೋಯಿತೆಂದು ಆಟಗಾರ್ತಿಯರು ಬೇಸರಪಟ್ಟುಕೊಂಡಿದ್ದರು. ಆದರೆ WPL ಟ್ರೋಫಿ ಕನ್ನಡಿಗರ ಹಣೆಬರಹದಲ್ಲಿದ್ದ ಕಾರಣ, ಫೈನಲ್‌ಗೆ ಲಗ್ಗೆ ಇಡುವ ಅವಕಾಶ ಸಿಕ್ಕಿ, ಇದೀಗ, ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.
ಅಸಮಾಧಾನ ಎರಡು ಮೂರು ದಿನಗಳಲ್ಲಿ ಶಮಮಗೊಳ್ಳುತ್ತದೆ: ಬಿ.ಎಸ್.ಯಡಿಯೂರಪ್ಪ
ಚುನಾವಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ




