Friday, November 22, 2024

Latest Posts

ಮೋದಿ ಸಂಪುಟದಲ್ಲಿ ಯಾರ್ ಯಾರಿಗೆ ಜಾಗ..?

- Advertisement -

ಅಭೂತಪೂರ್ವ ಗೆಲುವು ಸಾಧಿಸಿ ಮತ್ತೆ 2ನೇ ಬಾರಿಗೆ ಅಧಿಕಾರ ಹಿಡಿಯಲು ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಆದ್ರೆ ಈ ಬಾರಿ ಸಂಪುಟದಲ್ಲಿ ಮೋದಿ ಯಾರನ್ನೆಲ್ಲಾ ಸೇರಿಸಿಕೊಳ್ತಾರೆ ಅನ್ನೋ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ನಡೀತಿದೆ.

ಈ ಬಾರಿ ಮಂತ್ರಿಯಾಗೋ ಭಾಗ್ಯ ಯಾರಿಗೆ ಅಂತ ನೋಡೋದಾದ್ರೆ, ಚುನಾವಣೆಯಲ್ಲಿ ಪ್ರಭಾವಿ ಅಭ್ಯರ್ಥಿಗಳನ್ನ ಮಟ್ಟ ಹಾಕಿದ ಬಿಜೆಪಿ ಅಭ್ಯರ್ಥಿಗಳಿಗೆ ಮೋದಿ ಮಣೆ ಹಾಕಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಬ್ರಾಹ್ಮಣ ಕೋಟಾದಲ್ಲಿ ಈ ಬಾರಿ ಪ್ರಹ್ಲಾದ್ ಜೋಶಿ, ಬಿಜೆಪಿ ಯುವ ಮೋರ್ಚಾದಿಂದ ಪ್ರತಾಪ್ ಸಿಂಹಾ ಪರವಾಗಿ ಆರ್ ಎಸ್ ಎಸ್  ಲಾಭಿ ನಡೆಸುತ್ತಿದೆ. ಇನ್ನು ಕಲಬುರಗಿಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ನ ಹಿರಿಯ ಮುಖಂಡ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯನ್ನೇ ಸೋಲಿಸಿದ ಡಾ  .ಉಮೇಶ್ ಜಾಧವ್, ತುಮಕೂರಿನಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಮಣಿಸಿದ ಜಿ.ಎಸ್ ಬಸವರಾಜುಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಪಕ್ಕಾ ಅನ್ನೋ ಚರ್ಚೆ ನಡೆದಿದೆ.

ಹಾಗೆಯೇ ಹೇಗಾದ್ರೂ ಮಾಡಿ ಶೋಭಾ ಕರಂದ್ಲಾಜೆಗೆ ಸಂಪುಟದಲ್ಲಿ ಸ್ಥಾನ ಗಿಟ್ಟಿಸಬೇಕು ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಶತಪ್ರಯತ್ನ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಸ್ಥಾನವನ್ನ ಯಾರು ತುಂಬ್ತಾರೆ ಅನ್ನೋ ಪ್ರಶ್ನೆ ಒಂದೆಡೆಯಾದ್ರೆ. ಮತ್ತೊಂದೆಡೆ ಪದೇ ಪದೇ ವಿವಾದಿತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗೋ ಅನಂತ್ ಕುಮಾರ್ ಹೆಗಡೆ, ಸದಾನಂದಗೌಡ ,ರಮೇಶ್ ಜಿಗಜಿಣಗಿ ಗೆ ಈ ಬಾರಿ ಸಂಪುಟದಿಂದ ಕೊಕ್ ನೀಡೋ ಸಾಧ್ಯತೆಯಿದೆ ಅನ್ನೋ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ಸೇರಿಯೇಬಿಟ್ರಾ ರಮೇಶ್ ಜಾರಕಿಹೊಳಿ…? ತಪ್ಪದೇ ಈ ವಿಡಿಯೋ ನೋಡಿ.

- Advertisement -

Latest Posts

Don't Miss