Friday, December 20, 2024

Latest Posts

ಸಿದ್ಧಗಂಗಾ ಮಠಕ್ಕೆ 75 ಲಕ್ಷ ರೂಪಾಯಿ ಕರೆಂಟ್ ಬಿಲ್: ಬಿ.ವೈ.ವಿಜಯೇಂದ್ರ ಆಕ್ರೋಶ

- Advertisement -

Tumakuru News: ತುಮಕೂರಿನ ಸಿದ್ಧಗಂಗಾ ಮಠಕ್ಕೆ 75 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದ್ದು, ಆದಷ್ಟು ಬೇಗ ಬಿಲ್ ಕಟ್ಟುವಂತೆ ನೊಟೀಸ್ ನೀಡಲಾಗಿದೆ. ಇದು ನಿಜಕ್ಕೂ ಶಾಕಿಂಗ್ ಘಟನೆಯಾಗಿದ್ದು, ಹಲವರು ಇದಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಈ ಬಗ್ಗೆ ಟ್ವೀಟ್ ಮಾಡಿ, ಬೇಸರ ಹೊರಹಾಕಿದ್ದು, ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿಯೂ; ದಯವೇ ಧರ್ಮದ ಮೂಲವಯ್ಯಾ’ ಎಂಬ ಬಸವತತ್ವದಡಿ ಸರ್ವರ ಬಾಳಿಗೂ ಬೆಳಕು ನೀಡುತ್ತಿರುವ ತ್ರಿವಿಧ ದಾಸೋಹದ ಮೂಲಕ ‘ಭೂ-ಕೈಲಾಸ’ ಎಂದೇ ಬಣ್ಣಿಸಲ್ಪಡುವ ಸಿದ್ದಗಂಗಾ ಮಠದ ಮೇಲೆ ದಯೆ, ದಾಕ್ಷಿಣ್ಯವಿಲ್ಲದೆ ಕಾಂಗ್ರೆಸ್ ಸರ್ಕಾರ ಕೆಐಎಡಿಬಿ ಮೂಲಕ ₹70 ಲಕ್ಷ ರೂ ವಿದ್ಯುತ್ ಬಿಲ್ ಪಾವತಿಸುವಂತೆ ನೋಟಿಸ್ ನೀಡಿ ನಿರ್ದಾಕ್ಷಿಣ್ಯ ವರ್ತನೆ ತೋರಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ.

ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ತ್ರಿವಿಧ ದಾಸೋಹ ಹಾಗೂ ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ಸಮರ್ಪಣೆ ಮಾಡಿಕೊಂಡಿರುವ ಮಠಮಾನ್ಯಗಳಿಗೆ ವಿಶೇಷ ಅನುದಾನವನ್ನು ನೀಡಿ ಮಠದ ಸಂಸ್ಕೃತಿಗೆ ನೆರವು ಒದಗಿಸುವುದು ‘ಸರ್ಕಾರದ ಹೆಮ್ಮೆ’ ಎನ್ನುವ ಸಂದೇಶ ಸಾರಲಾಗಿತ್ತು ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಪ್ರಸ್ತುತ ಕಾಂಗ್ರೆಸ್ ಸರ್ಕಾರ ವಕ್ಫ್ ಮೂಲಕ ಮಠಮಾನ್ಯಗಳ ಆಸ್ತಿಯನ್ನು ಕಬಳಿಸಲು ಹೊರಟು ಈಗ ಸಿದ್ದಗಂಗೆಯಂತಹ ಕೋಟ್ಯಂತರ ಭಕ್ತರ ಧಾರ್ಮಿಕ ಕ್ಷೇತ್ರದ ಮೇಲೂ ಕೆಂಗಣ್ಣು ಬೀರಿರುವುದು ಈ ಸರ್ಕಾರದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿ.ವೈ.ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss