Friday, December 27, 2024

Latest Posts

ಸಿಲಿಂಡರ್ ಸೋರಿಕೆಯಾಗಿ ಸಾವು ಪ್ರಕರಣ: ಕಿಮ್ಸ್ ಎದುರು ಇಬ್ಬರು ಪತ್ನಿಯರ ಹೈಡ್ರಾಮಾ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಲಾಧಾರಿಗಳು ಇಂದು ಚಿಕಿತ್ಸೆ ಫಲಿಸದೇ, ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ.

ಆದರೆ ಹುಬ್ಬಳ್ಳಿ ಕಿಮ್ಸ್ ಶವಾಗಾರದ ಬಳಿ ಹೈಡ್ರಾಮಾ ನಡೆದಿದ್ದು, ಮೃತ ನಿಜಲಿಂಗಪ್ಪನ ಶವಕ್ಕಾಗಿ ಇಬ್ಬರ ಹೆಂಡತಿಯರು ಜಗಳ ನಡೆಸಿದ್ದಾರೆ. ನಿಜಲಿಂಗಪ್ಪನ ಮೊದಲ ಮತ್ತು ಎರಡನೇ ಹೆಂಡತಿಯರು ಪತಿ ಶವವನ್ನು ತಮ್ಮ ಮನೆಗೇ ಕೊಂಡೊಯ್ಯಬೇಕು ಎಂದು ಗಲಾಟೆ ಮಾಡಿದ್ದಾರೆ.

ಎರಡನೇಯ ಪತ್ನಿಯಾಗಿರುವ ಶಾಂತಾ, ಮೊದಲು ಪತಿಯ ಪೂಜೆ ಮಾಡಲು ತನಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾಳೆ. ಅಲ್ಲದೇ, ಮೊದಲ ಪತ್ನಿ ಇಷ್ಟು ದಿನ ದೂರವಿದ್ದಳು. ಈಗ ಪರಿಹಾರ ಸಿಗುತ್ತದೆ ಎಂದು ಬಂದಿದ್ದಾಳೆ. ನನ್ನ ಮನೆಗೆ ಶವವನ್ನು ಕೊಂಡೊಯ್ಯಲು ನೀವೆಲ್ಲ ಸಹಾಯ ಮಾಡುತ್ತೇನೆ ಎಂದಿದ್ದೀರಿ. ಈಗ ಇವಳಿಗೆ ನೀವೆಲ್ಲ ಬೆಂಬಲಿಸುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾಳೆ.

ನಿಜಲಿಂಗಪ್ಪ ಆಸ್ಪತ್ರೆ ಸೇರಿದಾಗ ಯಾರೂ ಬರಲಿಲ್ಲ. ಈಗ ಪರಿಹಾರ ಸಿಗುತ್ತೆ ಅಂತ ಮೊದಲ ಹೆಂಡತಿ ಬಂದಿದ್ದಾಳೆ. ಇದಕ್ಕೆ ನೀವೆಲ್ಲ ಅವಕಾಶ ಮಾಡಿಕೊಡುತ್ತಿದ್ದೀರಿ ಎಂದು ಕಿಡಿಕಾರಿದ್ದಾಳೆ. ಬಳಿಕ ಪೊಲೀಸರು ಮಧ್ಯಸ್ತಿಕೆ ವಹಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಇಬ್ಬರ ಮೃತದೇಹಗಳನ್ನು ಅವರವರ ಮನೆಗೆ ಕಳುಹಿಸಿಕೊಟ್ಟಿದ್ದು, ವಿದ್ಯಾನಗರದ ರುದ್ರಭೂಮಿಯಲ್ಲಿ ಸಂಜಯ್ ಸವದತ್ತಿ ಅಂತ್ಯಕ್ರಿಯೆ ನಡೆಯಲಿದೆ. ಹುಬ್ಬಳ್ಳಿಯ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ನಿಜಲಿಂಗಪ್ಪ ಬೆಪೂರ ಅಂತ್ಯಸಂಸ್ಕಾರ ನಡೆಯಲಿದೆ.

- Advertisement -

Latest Posts

Don't Miss