ಕೆಆರ್ ಪುರ: ಬಡ ಮಧ್ಯಮ ವರ್ಗದ ಜನರ ಬದುಕು,ಭವಿಷ್ಯವನ್ನು ಕಿತ್ತುಕೊಂಡಿರುವ ಬಿಜೆಪಿ ಪಕ್ಷವನ್ನು ದೂರವಿಟ್ಟು ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಬಾಬು ತಿಳಿಸಿದರು.
ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಎಚ್.ಎ.ಎಲ್.ವಿಜ್ಞಾನನಗರ,ನೆಲ್ಲೂರುಪುರಂ,ರೆಡ್ಡಿಪಾಳ್ಯ ಎಲ್.ಬಿ.ಶಾಸ್ತ್ರಿ ನಗರ, ಅಬ್ಬಯ್ಯ ರೆಡ್ಡಿ ಬಡಾವಣೆ, ವಿಭೂತಿಪುರ, ಅನ್ನಸಂದ್ರಪಾಳ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಅವರು ಮಾತನಾಡಿದರು.
ಬಿಜೆಪಿ ಪಕ್ಷದ ಸರ್ಕಾರದ ಅವಧಿಯಲ್ಲಿ ಬಡ ಮಧ್ಯಮ ವರ್ಗದ ಜನರ ಬದುಕನ್ನು ಹೀನಾಯ ಸ್ಥಿತಿಗೆ ತಲುಪಿಸಿದ್ದಾರೆ, ಬದುಕು ಮತ್ತು ಭವಿಷ್ಯವನ್ನು ಹಾಳುಗೆಡವಿದ್ದಾರೆ ಅಂತಹವರನ್ನು ದೂರವಿಡಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ 200 ಯೂನಿಟ್ ವಿದ್ಯುತ್, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಗೃಹಲಕ್ಷ್ಮಿಯರಿಗೆ 2000, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹತ್ತು ಹಲವು ಯೋಜನೆಗಳು ನಿಮ್ಮ ಕೈ ಸೇರಲಿದ್ದು ಇದು ಕಾಂಗ್ರೆಸ್ ಗ್ಯಾರೆಂಟಿಯಾಗಿದ್ದು ಯೋಚಿಸಿ ಮತ ಚಲಾವಣೆ ನಡೆಸಿ ಹಾಗೂ ಉಜ್ವಲ ಭವಿಷ್ಯವನ್ನು ಪಡೆಯಿರಿ ಎಂದರು.
ಮುಸ್ಲಿಂ ಭಾಂದವರಿಗೆ ಇದ್ದ 4% ಮೀಸಲಾತಿಯನ್ನು ಕಿತ್ತುಹಾಕಿದ್ದಾರೆ, ಅಲ್ಪಸಂಖ್ಯಾತರ ಮಕ್ಕಳು ಇದರಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮೀಸಲಾತಿಯಿಂದ ವೈದ್ಯ, ಇಂಜಿನಿಯರ್ ಆಗುವ ಕನಸನ್ನು ಹೊತ್ತಿದ್ದ ಮಕ್ಕಳ ಬದುಕು ಕತ್ತಲೆಗೆ ದೂಡಿದೆ. ನಿಮ್ಮ ಮಕ್ಕಳ ಭವಿಷ್ಯವನ್ನು ಕಿತ್ತುಕೊಂಡ ಬಿಜೆಪಿಗೆ ಮತ ನೀಡದಂತೆ ಮನವಿ ಮಾಡಿದರು.
ಕೆಆರ್ ಪುರದಲ್ಲಿ ಗೂಂಡಾವರ್ತನೆ ತಾಂಡವ ವಾಡುತ್ತಿದ್ದು ಅದಕ್ಕೆ ಕಡಿವಾಣ ಬೇಕಿದೆ, ಹೆದರಿಸಿ ಬೆದರಿಸುವ ಸಂಸ್ಕ್ರತಿಯನ್ನು ಕೊನೆಗಾಣಿಸುವ ಸಮಯ ಹತ್ತಿರವಾಗುತ್ತಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಮುಂದಿನ ದಿನಗಳಲ್ಲಿ ನಿಮ್ಮ ಮನೆ ಮಗನಂತೆ ಸೇವೆ ಮಾಡುವ ಅವಕಾಶವನ್ನು ನನಗೆ ನೀಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ, ಮುಖಂಡರಾದ ಡಿ.ಎ.ಗೋಪಾಲ್,ಮಂಜುನಾಥ್, ಕಲ್ಕೆರೆ ನಾರಾಯಣ ಸ್ವಾಮಿ ಇದ್ದರು.
ಬಿಜೆಪಿ ಪ್ರಣಾಲಿಕೆ ರಿಲೀಸ್, ಪ್ರತಿದಿನ ನಂದಿನಿ ಹಾಲು ವಿತರಣೆಗೆ ನಿರ್ಧಾರ..
\https://karnatakatv.net/k-s-arun-kumar-joined-bjp/