Sunday, December 22, 2024

Latest Posts

ಶ್ರೀಮಂತ ಪಾಟೀಲ್ ಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ..!

- Advertisement -

www.karnatakatv.net :ಬೆಳಗಾವಿ: ಶಾಸಕ ಶ್ರೀಮಂತ ಪಾಟೀಲ್ ಸತ್ಯ ನುಡಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಎಸಿಬಿ ಈ ಬಗ್ಗೆ ಸ್ವಯಂ ದೂರು ದಾಖಲು ಮಾಡಿಕೊಳ್ಳಬೇಕು. ಈ ಬಗ್ಗೆ ತನಿಖೆ ಆಗಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದರು.

ರವಿವಾರ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶ್ರೀಮಂತ ಪಾಟೀಲ್ ಗೆ ಬಿಜೆಪಿ ಸೇರಲು ಬಿಜೆಪಿ ಪಕ್ಷ ಆಮೀಷ ಒಡ್ಡಿರುವ ವಿಚಾರವಾಗಿ ಮಾತನಾಡಿದ್ದು, ಕೂಡಲೇ ಕೇಸ್ ದಾಖಲು ಮಾಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಶುದ್ಧವಾಗಿ ಆಡಳಿತಕ್ಕೆ ಬಂದಿದ್ದೇವೆ ಎಂದು ಬಿಜೆಪಿ ಹೇಳಿದೆ ಎಂದು ಕಿಡಿ ಕಾರಿದಾರು.‌

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ವಿಚಾರವಾಗಿ ಮಾತನಾಡಿದ ಅವರು, ಲೋಕಸಭಾ ಉಪಚುನಾವಣೆಗಿಂತ ಶೇ‌ 10 ರಷ್ಟು ಮತ ಕಡಿಕೆ ಬಂದಿದೆ. 10 ಜನ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ‌ 60 ಸಾವಿರ ಮತ ಬಂದಿದೆ. ಬಿಜೆಪಿಗೆ 70 ಸಾವಿರ, 50 ಸಾವಿರ ಮತ ಎಂಇಎಸ್ ಗೆ ಬಂದಿದೆ. ನನಗೆ ಸಮಾಧಾನ ತಂದಿದೆ ಅಂತ ನಾನು ಹೇಳಲ್ಲ ರಾಜಕೀಯದಲ್ಲಿ ನಂಬರ್ ಮುಖ್ಯವಾಗಿದೆ. ಪಾಲಿಕೆಯಲ್ಲಿ ನಂಬರ್ ಸೋಲನ್ನು ನಾವು ಒಪ್ಪುತ್ತೇವೆ ಎಂದು ತಿಳಿಸಿದರು. ‌

ಎಐಸಿಸಿಯಿಂದ ಸತ್ಯ ಶೋಧನಾ ಸಮಿತಿಯಿಂದ ತನಿಖೆ ಆಗಲಿದೆ. ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ಸೋಲಿನ ಪರಾಮರ್ಶೆ ತಿಳಿಯಲಿದ್ದೇವೆ.‌ ಅಭ್ಯರ್ಥಿಗಳು, ಮುಖಂಡರ ಜೊತೆಗೆ ಚರ್ಚೆ ನಡೆಸಲು ಮೊದಲ ತಂಡ ಬೆಳಗಾವಿಗೆ ಭೇಟಿ ನೀಡಲಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ನಮಗೆ ಕೊಟ್ಟಿರೋದು ಬೇರೆ ಇದೆ. ಬಿಜೆಪಿಗೆ ಕೊಟ್ಟಿರೋ ಮತದಾರರ ಪಟ್ಟಿಯೇ ಬೇರೆ ಆಗಿದೆ.‌ ಬೆಳಗಾವಿ ಅನೇಕ ವಾರ್ಡ್ ನಲ್ಲಿ ಈ ರೀತಿ ಘಟನೆ ನಡೆದಿದೆ. ನಮ್ಮ ಅನೇಕ ಅಭ್ಯರ್ಥಿಗಳು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಗೊಂದಲದ ಬಗ್ಗೆ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು. ಬೂತ್ ಎಜೆಂಟ್ಸ್  ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.‌

ಸೋತ ಅಭ್ಯರ್ಥಿಗಳು ಕೋರ್ಟ್ ಗೆ ಹೋಗುವ ವಿಚಾರವಾಗಿ ಮಾತನಾಡಿ, ಅದು ಸೋತ ಅಭ್ಯರ್ಥಿಗಳ ವೈಯಕ್ತಿಕ ನಿರ್ಧಾರ. ಎಂಇಎಸ್ ಬೇರೆ ಮತದಾರರ ಪಟ್ಟಿ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಪರೋಕ್ಷವಾಗಿ ಎಂಇಎಸ್ ಪರ ಬ್ಯಾಟ್ ಬಿಸಿದ್ದಾರೆ.

ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ

- Advertisement -

Latest Posts

Don't Miss