ಮಂಡ್ಯ: ಕಾಂಗ್ರೆಸ್‌ನ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿರುವ ಗುರುಚರಣ್ ಮತ್ತು ಕದಲೂರು ಉದಯ್ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿದ್ದಾರೆ. ಇಬ್ಬರೂ ಟಿಕೇಟ್ ಆಕಾಂಕ್ಷಿಯಾಗಿರುವುದರಿಂದ, ಟಿಕೇಟ್ ಯಾರಿಗೆ ಸಿಗುತ್ತದೆ ಅನ್ನೋ ಕುತೂಹಲ ಮಂಡ್ಯ ಜನರಲ್ಲಿ ಮನೆ ಮಾಡಿದೆ.
ಗುರುಚರಣ್, ಮಾಜಿ ಮುಖ್ಯಮಂತ್ರಿ ಮತ್ತು ಡಿಕೆಶಿ ಬೀಗರಾಗಿರುವ ಎಸ್.ಎಂ.ಕೃಷ್ಣ ಅವರ ಸಹೋದರನ ಮಗನಾಗಿದ್ದು, ರಾಜಕೀಯ ಹಿನ್ನೆಲೆ ಇರುವ ಕುಟುಂಬದವರಾಗಿದ್ದಾರೆ. ಇತ್ತ ಉದಯ್ ರಾಜಕೀಯ ಕುಟುಂಬದವರಲ್ಲದಿದ್ದರೂ, ಮದ್ದೂರು ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ, ಮಿಂಚಿನ ಸಂಚಾರ ನಡೆಸಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಇವರು ಕೂಡ ಚುನಾವಣೆಗೆ ನಿಲ್ಲೋದು ಗ್ಯಾರಂಟಿ ಅಂತಾ ಹೇಳಲಾಗಿದೆ.
ಗುರುಚರಣ್ ಡಿಕೆಶಿಗೆ ಸಂಬಂಧಿಯಾದ ಕಾರಣ, ಅವರಿಗೇ ಟಿಕೆಟ್ ಸಿಗಬಹುದು ಎಂದು ಕೆಲವರು ಅಂದಾಜು ಮಾಡಿದ್ದಾರೆ. ಇನ್ನು ಉದಯ್ ಕಾಂಗ್ರೆಸ್ ನಿಂದ ಟಿಕೇಟ್ ಸಿಗದಿದ್ರೆ, ಯಾವ ಪಕ್ಷದಿಂದ ಸ್ಪರ್ಧಿಸಬಹುದು ಅನ್ನೋ ಕುತೂಹಲವೂ ಮನೆ ಮಾಡಿದೆ.
ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದಿರಲಿ, ತಾಕತ್ತಿದ್ದರೆ ಅವರನ್ನು ಮುಟ್ಟಿ ನೋಡಿ: ಪಿ.ಎಂ.ನರೇಂದ್ರಸ್ವಾಮಿ ಸವಾಲ್
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜಿನಾಮೆಗೆ ಬಾಲ್ಕಿ ಜನತೆ ಮನವಿ…!
ಕಾಂಪೋಸ್ಟ್ ಸೌಲಭ್ಯವನ್ನು ಉದ್ಘಾಟಿಸಿದ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ