ಮೊನ್ನೆಯಷ್ಟೇ ಸೇಫ್ಟಿಗೋಸ್ಕರ್ ಹೆಂಡತಿಗೆ ವಾಟ್ಸಪ್ ಕಾಲ್ ಮಾಡ್ತೀನಿ ಅಂತಾ ಡಿಕೆಶಿ ಅವರು 91.1 ಎಫ್‌ಎಂನಲ್ಲಿ ಹೇಳಿದ್ದರು. ಈಗ ಅವರು ಟ್ವಿಟರ್ ನಲ್ಲಿ ಮತ್ತೊಂದು ವೀಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಡಿಕೆಶಿ ಶಾಲೆಯ ಅಡ್ಮಿಷನ್‌ಗಾಗಿ ಸಿಎಂ ಅವರ ಕಡೆಯಿಂದ ಹೇಳಿಸಿದರೂ, ತನಗೆ ಸೀಟ್ ಸಿಗಲಿಲ್ಲವೆಂಬ ಕುರಿತಾಗಿ, ಮಾತನಾಡಿದ್ದಾರೆ.
ಡಿಕೆಶಿ ಒಡೆತನದ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಬಗ್ಗೆ ಆರ್ ಜೆ ಮಾತನಾಡಿದಾಗ, ಪ್ರತಿಕ್ರಿಯಿಸಿದ ಡಿಕೆಶಿ, ನನಗೆ ವಿದ್ಯಾಭ್ಯಾಸದ ಮಹತ್ವ ಗೊತ್ತಿದೆ. ನಾನು ಡಿಗ್ರಿ ಪೂರ್ತಿ ಮುಗಿಸಿರಲಿಲ್ಲ. ಸಣ್ಣ ವಯಸ್ಸಿಗೆ ಮಂತ್ರಿಯಾದ ಕಾರಣ ಶಿಕ್ಷಣ ಪೂರ್ಣಗೊಳಿಸಲು ಆಗಲಿಲ್ಲ. 48ನೇ ವಯಸ್ಸಿನಲ್ಲಿ ಪರೀಕ್ಷೆ ಕಟ್ಟಿ ಪಾಸ್ ಮಾಡಿಕೊಂಡು ಡಿಗ್ರಿ ಮುಗಿಸಿದ್ದೇನೆ. ಎಜುಕೇಶನ್ ಎಷ್ಟು ಇಂಪಾರ್ಟೆಂಟ್ ಅಂದ್ರೆ, ನಿಮಗೆ ಸರಿಯಾಗಿ ಮಾತನಾಡಲು ಬರದಿದ್ದರೆ, ಸರಿಯಾದ ವಿದ್ಯಾಭ್ಯಾಸವಿಲ್ಲದಿದ್ದರೆ, ಸರಿಯಾದ ಜ್ಞಾನವಿಲ್ಲದಿದ್ದರೆ, ನೀವು ಯಶಸ್ವಿಯಾಗಲು ಸಾಧ್ಯವಿಲ್ಲ. ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಗ್ಲೋಬಲ್ ಲೇವಲ್‌ನಲ್ಲಿ ಹೆಸರು ಮಾಡಲಿ ಅನ್ನೋದೇ ನನ್ನ ಆಶಯ ಎಂದು ಹೇಳಿದ್ದಾರೆ.
ಅಲ್ಲದೇ ನನ್ನ ಶಾಲೆಯ ಅಡ್ಮಿಶನ್‌ಗಾಗಿ ಸಿಎಂ ಅವರ ಕಡೆಯಿಂದ ಹೇಳಿಸಿದರೂ ನನಗೆ ಸೀಟ್ ಸಿಗಲಿಲ್ಲ. ಬೇರೆ ಮಕ್ಕಳಿಗೆ ಸೀಟ್ ಸಿಕ್ಕರೂ, ನನಗೆ ಸೀಟ್ ಸಿಗಲಿಲ್ಲ. ಅಂದು ನಾನು ಸಿಎಂ ಮನೆಗೆ ಹೋಗಿದ್ದೆ, ಅಲ್ಲೇ ನಾನು ಮುಂದೆ ರಾಜಕಾರಣಿಯಾಗಲೇಬೇಕು ಎಂದು ತೀರ್ಮಾನಿಸಿದೆ. ಅಂದಿನಿಂದ ರಾಜಕಾರಣಿಯಾಗಲು ಏನೇನು ತಯಾರಿ ಬೇಕೋ, ಅದನ್ನೇ ಮಾಡಿಕೊಂಡು ಬಂದೆ. ಹಾಗಾಗಿ ಸಣ್ಣ ವಯಸ್ಸಿಗೆ ನಾನು ರಾಜಕಾರಣಿಯಾದೆ ಎಂದು ಡಿಕೆಶಿ ಹೇಳಿದ್ದಾರೆ. ಈ ಬಗ್ಗೆ ಡಿಕೆಶಿ ಇನ್ನೂ ಮಾತನಾಡಿದ್ದಾರೆ, ಏನೇನು ಮಾತನಾಡಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ನನ್ನ ಶಾಲೆಯ ಅಡ್ಮಿಷನ್‌ಗಾಗಿ ಮುಖ್ಯಮಂತ್ರಿ ಅವರ ಕಡೆಯಿಂದ ಹೇಳಿಸಿದರೂ ನನಗೆ ಸೀಟ್ ಸಿಗಲಿಲ್ಲ. ಈ ಕುರಿತಾಗಿ ರೇಡಿಯೋ ಸಿಟಿ 91.1 ಎಫ್ಎಂ ನ 'ನೋ ಪಾಲಿಟಿಕ್ಸ್' ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದೇನೆ. ಮರೆಯದೇ ನೋಡಿ. pic.twitter.com/XZjyTHB0Cl
— DK Shivakumar (@DKShivakumar) April 21, 2023
ಭಾರೀ ಮಳೆಯಿಂದಾಗಿ ಅಮಿತ್ ಶಾ ಕಾರ್ಯಕ್ರಮ ರದ್ದು, ಇನ್ನೊಮ್ಮೆ ಬರುತ್ತೇನೆಂದ ಚಾಣಕ್ಯ
‘ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ’
‘ಕಾಂಗ್ರೆಸ್ ಹಣ ಪಡೆದು, ಬಿ ಫಾರ್ಮ್ ವಿತರಣೆ ಮಾಡಿದೆ. ಅವರ 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ’