Thursday, April 3, 2025

Latest Posts

‘ನಾನು ಇಂಜಿನಿಯರ್ ಆಗಬೇಕು ಎಂಬುದು ನನ್ನ ಅಪ್ಪನ ಕನಸಾಗಿತ್ತು, ಆದರೆ… ‘

- Advertisement -

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 91.1 ಎಫ್‌ ಎಂ ಜೊತೆ ತಮ್ಮ ಬಾಲ್ಯದ ಬಗ್ಗೆ, ವಾಟ್ಸಪ್ ಕಾಲ್ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನಷ್ಟು ಮಾತನಾಡಿದ್ದಾರೆ. ಈ ಬಗ್ಗೆ ವೀಡಿಯೋವೊಂದನ್ನ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

91.1 ಎಫ್ಎಂನ ನೋ ಪಾಲಿಟಿಕ್ಸ್ ಪ್ಲೀಸ್ ಅನ್ನೋ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ರಾಜಕೀಯಕ್ಕೆ ಬರುವುದು ನನ್ನ ಬಾಲ್ಯದ ಕನಸಾಗಿತ್ತು. ಆದರೆ ನನ್ನ ತಂದೆಗೆ ನಾನು ಎಂಜಿನಿಯರ್ ಆಗಬೇಕು ಎಂಬ ಕನಸಿತ್ತು. ಆದರೆ ಮುಂದಾಗಿದ್ದೇ ಬೇರೆ ಎಂದು ಹೇಳಿದ್ದಾರೆ.

ಒಮ್ಮೆ ನಮ್ಮ ಮನೆಯಲ್ಲಿ ರೇಡ್ ಆಗಿತ್ತು. ಆಗ ನಮ್ಮ ಅಜ್ಜ ಚಿನ್ನ ಬೆಳ್ಳಿಯ ವ್ಯಾಪಾರ ಮಾಡುತ್ತಿದ್ದರು. ರೇಡ್ ಆದಾಗ, ಆ ಚಿನ್ನ ಬೆಳ್ಳಿಯನ್ನ ತಂದು ಅಧಿಕಾರಿಗಳ ಮುಂದೆ ಸುರಿದಿದ್ದರು. ಅಲ್ಲಿಗೆ ಬಂದಿದ್ದ ಇಂಜಿನಿಯರ್ ಬಳಿ ರೇಡ್ ನಿಲ್ಲಿಸಿಬಿಡಿ ಎಂದು ನನ್ನ ತಾತ ಮತ್ತು ಅಪ್ಪ ಮನವಿ ಮಾಡಿದರೂ. ಆದರೂ ಕೂಡ ಅವರು ರೇಡ್ ಮಾಡಿ, ಎಲ್ಲವನ್ನೂ ಕೊಂಡೊಯ್ದರು. ಆಗಲೇ ನನ್ನ ತಂದೆ ನನ್ನನ್ನು ಇಂಜಿನಿಯರ್ ಮಾಡಬೇಕು ಎಂದು ನಿರ್ಧರಿಸಿದರು. ಆದರೆ ನನಗೆ ಅದಕ್ಕಿಂತ ಮೊದಲೇ ರಾಜಕೀಯಕ್ಕೆ ಬರಬೇಕೆಂಬ ಮನಸ್ಸಿತ್ತು. ನಾನು ಇಂಜಿನಿಯರ್ ಆಗಲು ಸಾಧ್ಯವಾಗದ ಕಾರಣ, ಇಂಜಿನಿಯರಿಂಗ್ ಕಾಲೇಜು ಮಾಡಿ, ಸಾವಿರಾರು ಇಂಜಿನಿಯರ್‌ಗಳನ್ನ ಹುಟ್ಟುಹಾಕುತ್ತಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ. ಡಿಕೆಶಿ ಇನ್ನೂ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ನಟಿ ಅನುಷ್ಕಾ ಶೆಟ್ಟಿಗೆ ಫ್ರೀ ಬ್ಲೂಟಿಕ್ ಮಾರ್ಕ್ ಕೊಟ್ಟ ಎಲಾನ್ ಮಸ್ಕ್‌..

ವಿಧಾನಸಭಾ ಚುನಾವಣೆ ಮೂಲಕ ರಾಜ್ಯದಲ್ಲಿ ಐತಿಹಾಸಿಕ ಬದಲಾವಣೆ: ಕೆ.ಅಣ್ಣಾಮಲೈ

ಪಾದ್ರಿಯ ಜಮೀನಿನಲ್ಲಿ ಪತ್ತೆಯಾಯ್ತು 47 ಶವ, ಇದರ ಹಿಂದಿದೆ ಭಯಂಕರ ಕಾರಣ..

- Advertisement -

Latest Posts

Don't Miss