ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಶುರುವಾಗಲಿದ್ದು, ಕಂಠೀರವ ಕ್ರೀಡಾಂಗಣದಲ್ಲಿ 8 ರಾಜ್ಯದ ಸಿಎಂ, ಕಾಂಗ್ರೆಸ್ ನಾಯಕರು, ಹಲವು ಕಾಂಗ್ರೆಸ್ ಅಭಿಮಾನಿಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮೊದಲ ಬಾರಿಗೆ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರೇಷ್ಮೆ ಪಂಚೆ ಉಟ್ಟು, ಸಾಂಸ್ಕೃತಿಕ ಉಡುಪಿನಲ್ಲಿ ಮಿಂಚಿದ ಡಿಕೆಶಿ, ತಮ್ಮ ಕುಟುಂಬಸ್ಥರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದು, ಮಗಳು ಐಶ್ವರ್ಯ ಮತ್ತು ಅಳಿಯ ಕೂಡ ಸಾಥ್ ಕೊಟ್ಟಿದ್ದಾರೆ.
ರಾಜ್ಯ ರಾಜ್ಯಪಾಲರಾದ ಥಾವರ್ ಸಿಂಗ್ ಗೆಹ್ಲೋಟ್ ಡಿ.ಕೆ.ಶಿವಕುಮಾರ್ ಗೆ ಪ್ರಮಾಣವಚನ ಬೋಧಿಸಿದ್ದು, ಡಿ.ಕೆ.ಶಿವಕುಮಾರ್ ಹೆಸರಿನ ನಾನು ಎಂದು ಮಾತು ಆರಂಭಿಸಿದ ಡಿಕೆಶಿ, ಶ್ರೀಗಂಗಾಧನ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇನ್ನು ಇವರೊಂದಿಗೆ 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್ ಇಷ್ಟು ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ನಿತೀಶ್ ಕುಮಾರ್, ಸ್ಟಾಲಿನ್, ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಸೀತಾರಾಮ್ ಯಚೂರಿ, ತೇಜಸ್ವಿ ಯಾದವ್, ಎ ರಾಜಾ, ಫಾರೂಕ್ ಅಬ್ದುಲ್ಲಾ, ನಟ ದುನಿಯಾ ವಿಜಯ್, ನಟ ಶಿವರಾಜ್‌ಕುಮಾರ್, ಸಾಧು ಕೋಕಿಲಾ, ನಟಿ ರಮ್ಯಾ, ಕಮಲ್ ಹಾಸನ್, ಕಾರ್ತಿ ಚಿದಂಬರಂ, ಉಮಾಶ್ರೀ, ನಿಶ್ವಿಕಾ ನಾಯ್ಡು ಸೇರಿ, ದೇಶದ ಮೂಲೆಮೂಲೆಯಿಂದ ಬಂದಿರುವ ಹಲವು ಕಾಂಗ್ರೆಸ್ ನಾಯಕರು, ಸಿನಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Live ಪ್ರಮಾಣವಚನ ಸ್ವೀಕಾರ ಸಮಾರಂಭ ಬೆಂಗಳೂರು, ಕರ್ನಾಟಕ https://t.co/HLVn8OM4Es
— Karnataka Congress (@INCKarnataka) May 20, 2023
ಪ್ರಿಯಾಂಕಾ, ರಾಹುಲ್‌ರನ್ನ ಭೇಟಿ ಮಾಡಿ, ಧನ್ಯವಾದ ಸಲ್ಲಿಸಿದ ಸಿದ್ದು, ಡಿಕೆಶಿ
‘ನೋಟು ನಿಷೇಧ ಎಂಬ ಅಸ್ತ್ರವನ್ನು ಪ್ರಧಾನಿ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’