Wednesday, September 17, 2025

Latest Posts

‘ಕರುನಾಡಿನಲ್ಲಿ ಕಾಂಗ್ರೆಸ್ ಸೂರ್ಯೋದಯಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ’

- Advertisement -

ಕಾಂಗ್ರೆಸ್ ಎರಡನೇಯ ಪಟ್ಟಿ ಬಿಡುಗಡೆಯಾಗಿದ್ದು, 42 ಕ್ಷೇತ್ರಗಳಿಗೆ ಟಿಕೇಟ್ ಫೈನಲ್ ಮಾಡಲಾಗಿದೆ. ಮಂಡ್ಯ, ಧಾರವಾಡ, ಸೇರಿ ಹಲವು ಪ್ರಮುಖ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ, ಟಿಕೇಟ್ ಕೊಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದು, ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಸಮಿತಿ ಅಂತಿಮಗೊಳಿಸಿರುವ 2ನೇ‌ಪಟ್ಟಿ ಹೀಗಿದೆ. ಕಾಂಗ್ರೆಸ್ಅನ್ನು ಅಧಿಕಾರಕ್ಕೆ ತರುವ ಬಹು ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಎಲ್ಲರಿಗೂ ಶುಭವಾಗಲಿ. ಛಲಬಿಡದೆ ಗುರಿಯತ್ತ ಮುನ್ನಡೆಯಿರಿ. ಕರುನಾಡಿನಲ್ಲಿ ಕಾಂಗ್ರೆಸ್ ಸೂರ್ಯೋದಯಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ ಎಂದು ಹೇಳಿ, ಲೀಸ್ಟ್ ಫೋಟೋ ಅಪ್ಲೋಡ್ ಮಾಡಿದ್ದಾರೆ.

ನಿನ್ನೆಯಷ್ಟೇ ದೆಹಲಿಗೆ ಹೋಗಿ, ಹೈಕಮಾಂಡ್‌ ಜೊತೆ ಚರ್ಚಿಸಿ, ಕಾಂಗ್ರೆಸ್ ಅಭ್ಯರ್ಥಿಗಳ ಲೀಸ್ಟ್ ರೆಡಿ ಮಾಡಿದ್ದ, ಡಿಕೆಶಿ, ನಿನ್ನೆಯೇ ಈ ಬಗ್ಗೆ ಸುಳಿವು ಕೊಟ್ಟಿದ್ದರು. ನಿನ್ನೆ ಕಾಂಗ್ರೆಸ್ 2ನೇ ಲೀಸ್ಟ್ ಯಾವಾಗ ರಿಲೀಸ್ ಮಾಡುತ್ತೀರಿ..? ಸಿದ್ದರಾಮಯ್ಯ 2 ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುತ್ತಾರಾ..? ಎಂದು ಕೇಳಿದ್ದಕ್ಕೆ, ಸೂರ್ಯೋದಯವಾಗಲಿ ಎಲ್ಲ ನಿಮಗೆ ಗೊತ್ತಾಗತ್ತೆ ಎಂದು ಹೇಳಿದ್ದರು. ಈ ಮೂಲಕ ಇಂದು 2ನೇ ಲೀಸ್ಟ್ ಬಿಡುಗಡೆಯಾಗತ್ತೆ ಎಂದು ಸೂಚನೆ ಕೊಟ್ಟಿದ್ದರು.

ಅಲ್ಲದೇ ಸುದೀಪ್ ಬಿಜೆಪಿ ಪ್ರಚಾರಕ್ಕೆ ಬರುತ್ತಾರೆಂಬ ಬಗ್ಗೆ ಟಾಂಗ್ ಕೊಟ್ಟ ಡಿಕೆಶಿ, ಬಿಜೆಪಿ ಪ್ರಚಾರದ ವೇಳೆ ಜನ ಸೇರುತ್ತಿಲ್ಲ. ಹಾಗಾಗಿ ಅವರು ಸ್ಟಾರ್ ನಟರ ಮೊರೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು.

ಅಭಿಷೇಕ್ ಅಂಬರೀಷ್ ಮದುವೆಗೆ ಆಮಂತ್ರಣ ಕೊಟ್ಟಿದ್ದು ಯಾರ್ಯಾರಿಗೆ ಗೊತ್ತಾ..?

ಮಂಡ್ಯ ಟಿಕೇಟ್ ಪೈಪೋಟಿ ಅಂತ್ಯ, ರವಿಕುಮಾರ್‌ಗೆ ಚಾನ್ಸ್ ಕೊಟ್ಟ ಕಾಂಗ್ರೆಸ್, ಮದ್ದೂರಿಗೆ ಯಾರು..?

ಕಾಂಗ್ರೆಸ್ 2ನೇ ಪಟ್ಟಿ ರಿಲೀಸ್, 42 ಕ್ಷೇತ್ರಗಳಿಗೆ ಟಿಕೇಟ್ ಫೈನಲ್

- Advertisement -

Latest Posts

Don't Miss