ಹಾಸನ: ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಮಾಜಿ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ವೇಳೆ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ.
ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ . ಕಾಂಗ್ರೆಸ್ ಎಲ್ಲಿ ಇರತ್ತೋ ಅಲ್ಲಿ ರೈತ ಪರ ಚಿಂತನೆ ಇರತ್ತೆ. ಕಾಂಗ್ರೆಸ್ ಎಲ್ಲಿ ಇರುತ್ತೋ ಅಲ್ಲಿ ಸಾಮಾಜಿಕ ನ್ಯಾಯ ಇರುತ್ತೆ. ಕಾಂಗ್ರೆಸ್ ಇದ್ದ ಕಡೆ ಬಡವರ ಕೈಗೆ ಅಧಿಕಾರಕೊಟ್ಟಿದ್ದೇವೆ. ಎತ್ತಿನಹೊಳೆ ಅನುಷ್ಠಾನಕ್ಕಾಗಿ ನಾನು ಕಾಂಗ್ರೆಸ್ ಸೇರ್ತಾ ಇದ್ದೇನೆ ಅಂತಾ ಹೇಳಿದ್ದಾರೆ. ಅಧಿಕಾರ ಹಾಗೂ ಹಣಕ್ಕಾಗಿ ನಮ್ಮ ಪಕ್ಷ ಸೇರಿಲ್ಲ. ಸಾಮಾಜಿಕ ಬದ್ದತೆಯನ್ಜು ಇಡ್ಕೊಂಡು ನಮ್ಮ ಪಕ್ಷ ಸೇರಿದ್ದಾರೆ ಎಂದು ಸುರೇಶ್ ಶಿವರಾಮೇಗೌಡರನ್ನ ಹೊಗಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನವನ್ನೂ ಗೆಲ್ಲೋದಕ್ಕೆ ನಮ್ಮ ಪಕ್ಷ ಸೇರಿದ್ದಾರೆ. ಈ ಜಿಲ್ಲೆಯಲ್ಲಿ ಸಿನಿಮಾ ನೋಡೋ ಹಾಗಿಲ್ಲ. ಹಾಸನ ನೋಡಿದ್ರೆ ಸಿನಿಮಾ ನೋಡಿದ ಹಾಗೆ ಆಗುತ್ತೆ. ಅವರಿಗೆ ತಕ್ಕಪಾಠ ಕಲಿಸೋ ಸಂದರ್ಭ ಬಂದಿದೆ ಎಂದು ಹಾಸನ ಜೆಡಿಎಸ್ ಟಿಕೇಟ್ ಗೊಂದಲದ ಬಗ್ಗೆ ಸುರೇಶ್ ವ್ಯಂಗ್ಯವಾಡಿದ್ದಾರೆ.
ಅರಸೀಕೆರೆ ಶಿವಲಿಂಗೇಗೌಡ್ರು ಅಂದ್ರೆ ಫೇಮಸ್. ವಿಧಾನಸಭೆಯಲ್ಲಿ ಅವರದ್ದೇ ದಾಟಿಯಲ್ಲಿ ಮಾತಾಡಿ ಜನಮನ್ನಣೆ ಗಳಿಸಿದ್ದಾರೆ. ಯಾವುದೇ ಭಿನ್ನಾಪ್ರಾಯ ಇಟ್ಕೊಳ್ಳದೇ ಶಿವಲಿಂಗೇಗೌಡ್ರನ್ನ ಗೆಲ್ಲಿಸಿ ಎಂದು ಡಿ.ಕೆ.ಸುರೇಶ್ ಹಾಸನ ಜನರಲ್ಲಿ ಮನವಿ ಮಾಡಿದ್ದಾರೆ.
‘ಜೆಡಿಎಸ್‌ನಲ್ಲಿ ದೇವೇಗೌಡರು, ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು’
ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರತ್ತೆ: ಭವಿಷ್ಯ ನುಡಿದ ಸಿದ್ದರಾಮಯ್ಯ..
‘2ನೇ ಬಾರಿಗೆ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾಲೂರು ಖಾಲಿ ಮಾಡ್ತೇನೆ’