Tuesday, April 29, 2025

Latest Posts

ದಾದಾ ಸಾಹೇಬ್ ಯಾರು..? ಫಾಲ್ಕೆ ಪ್ರಶಸ್ತಿ ಏನನ್ನು ಒಳಗೊಂಡಿರುತ್ತದೆ..?

- Advertisement -

ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ದಾದಾಸಾಹೇಬ್ ಪ್ರಶಸ್ತಿ ಕೊಡಲಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಈ ಪ್ರಶಸ್ತಿಗೆ ದಾದಾಸಾಹೇಬ್ ಎಂಬ ಹೆಸರೇಕೆ ಇಡಲಾಯಿತು..? ದಾದಾಸಾಹೇಬ್ ಯಾರು..? ಭಾರತೀಯ ಸಿನಿ ಇಂಡಸ್ಟ್ರಿಗೆ ಅವರ ಕೊಡುಗೆ ಏನು..? ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಏನನ್ನು ಒಳಗೊಂಡಿರುತ್ತದೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.

ಫಾಲ್ಕೆಯವರ ಪೂರ್ತಿ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ. ಭಾರತೀಯ ಸಿನಿರಂಗದ ಪಿತಾಮಹನೆಂಬ ಬಿರುದು ಪಡೆದ ಫಾಲ್ಕೆಯವರು ಹುಟ್ಟಿದ್ದು ಮುಂಬೈನ ತ್ರಯಂಬಕೇಶ್ವರದಲ್ಲಿ.

ದೇಶದ ಮೊದಲ ಧೀರ್ಘ ಮೂಕಚಿತ್ರವಾದಂಥ ರಾಜಾ ಹರಿಶ್ಚಂದ್ರ ಚಿತ್ರದ ನಿರ್ಮಾಣ ಮತ್ತು ನಿರ್ದೇಶನದ ಖ್ಯಾತಿ ಇವರಿಗೆ ಸಲ್ಲುತ್ತದೆ. ದಾದಾ ಸಾಹೇಬ್ ಫಾಲ್ಕೆಯವರು ಅವರ ವೃತ್ತಿ ಬದುಕಿನಲ್ಲಿ 95 ಸಿನಿಮಾಗಳನ್ನ ಮತ್ತು 26 ಕಿರುಚಿತ್ರಗಳನ್ನ ತೆರೆಗೆ ತಂದರು.

1937ರಲ್ಲಿ ತೆರೆಕಂಡ ಚಿತ್ರವನ್ನ ಶಬ್ದಸಹಿತ ಚಿತ್ರವೆಂದು ಗುರುತಿಸಲಾಗಿತ್ತು. ಈ ಚಿತ್ರದ ನಿರ್ದೇಶನ ಮಾಡುವ ಸಮಯದಲ್ಲಿ ಫಾಲ್ಕೆಯವರಿಗೆ 67 ವರ್ಷ ವಯಸ್ಸಾಗಿತ್ತು.

ಫಾಲ್ಕೆಯವರು ಹಲವು ಚಿತ್ರಗಳನ್ನ ನಿರ್ದೇಶಿಸಿದ್ದು, ಮೋಹಿನಿ ಭಸ್ಮಾಸುರ, ಸತ್ಯವಾನ್ ಸಾವಿತ್ರಿ, ಲಂಕಾ ದಹನ್, ಶ್ರೀಕೃಷ್ಣ ಜನ್ಮ, ಕಾಳಿಂಗ ಮರ್ಧನ, ಗಂಗಾವತರಣ ದಾದಾಸಾಹೇಬ್ ನಿರ್ದೇಶನದ ಪ್ರಮುಖ ಚಿತ್ರಗಳಾಗಿದೆ.

ಇನ್ನು ಭಾರತೀಯ ಚಿತ್ರರಂಗಕ್ಕೆ ಉನ್ನತ ಮಟ್ಟದಲ್ಲಿ ಕೊಡುಗೆ ನೀಡಿದವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತಿದ್ದು,1969ರಿಂದ ಈ ಪ್ರಶಸ್ತಿ ನೀಡಲು ಶುರು ಮಾಡಲಾಯಿತು.

ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಏನನ್ನು ಒಳಗೊಂಡಿರುತ್ತದೆ ಎಂದು ನೋಡೋದಾದ್ರೆ, ಶಾಲು, ಹತ್ತು ಲಕ್ಷ ನಗದು ಮತ್ತು ಸ್ವರ್ಣ ಕಮಲ ಪದಕ ಹೊಂದಿರುತ್ತದೆ.

- Advertisement -

Latest Posts

Don't Miss