Hubli News: ಹುಬ್ಬಳ್ಳಿಯಲ್ಲಿ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಭಕ್ತಿಭಾವದಿಂದ ಆಚರಿಸಿದರು. ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮೌಲಾನಾ ಹಪೀಸ್ ಮುಫ್ತಿ ಸುಭಾನ್ ನೇತೃತ್ವದಲ್ಲಿ ನಡೆದ ವಿಶೇಷ ನಮಾಜ್ನಲ್ಲಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಮಾಜದ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಹಬ್ಬದ ಅಂಗವಾಗಿ ಜನರು ಪರಸ್ಪರ ಅಪ್ಪಿಕೊಂಡು ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮೊಹಮ್ಮದ ಯುಸೂಫ್ ಸವಣೂರ, ಅಲ್ತಾಫ ಹಳ್ಳೂರ, ಬಸೀರ ಗೂಡಮಾಲೆ, ಮೆಹಮೂದ ಬಾಬಾಜಾನ್ ಮುಧೋಳ, ಅನ್ವರ್ ಮುಧೋಳ, ಸಲೀಂ ಸುಂಡಕೆ, ಮಲ್ಲಿಕ ಸಿಕಂದರ, ವಾಬ್ ಮುಲ್ಲಾ, ಕೆ.ಡಿ. ಕಮ್ಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೊಲೀಸ್ ಬಂದೋಬಸ್ತ್ ಮಧ್ಯೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಬಕ್ರೀದ್ ಆಚರಣೆ ಶಾಂತಿಯುತವಾಗಿ ನಡೆಯಿತು.
Sangamesh Sattigeri, Karnataka TV, Hubballi




