Thursday, April 17, 2025

Latest Posts

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ, ಹೊಸ ಪಕ್ಷ ಘೋಷಣೆ

- Advertisement -

Movie News: ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿ ಇತ್ತು. ಆದರೆ ಇಂದು ಆ ಸುದ್ದಿ ನಿಜವಾಗಿದ್ದು, ದಳಪತಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂದು ಪಕ್ಷಕ್ಕೆ ನಾಮಕರಣ ಮಾಡಿದ್ದಾರೆ.

ವಿಜಯ್ ಸಿನಿಮಾ ಬಂದ್ರೆ, ಅದು ಕೋಟಿ ಕೋಟಿ ಗಳಿಸೋದಂತೂ ಗ್ಯಾರಂಟಿ ಅನ್ನೋ ಮಟ್ಟಿಗೆ ನಿರ್ಮಾಪಕರು, ಕಣ್ಣು ಮುಚ್ಚಿ ದುಡ್ಡು ಹಾಕುವಷ್ಟು ಫ್ಯಾನ್ ಬೇಸ್ ಇವರಿಗಿದೆ. ಬರೀ ತಮಿಳುನಾಡು ಅಲ್ಲದೇ, ಕೇರಳ, ಕರ್ನಾಟಕ, ಆಂದ್ರಪ್ರದೇಶದಲ್ಲೂ ವಿಜಯ್‌ಗೆ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. ಇನ್ನು ಇತ್ತೀಚೆಗಷ್ಟೇ ವಿಜಯ್ ಇನ್‌ಸ್ಟಾಗ್ರಾಮ್ ಅಕೌಂಟ್ ಓಪೆನ್ ಮಾಡಿದ್ರು. ಹಾಗೆ ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಅವರಿಗೆ ಒನ್ ಮಿಲಿಯನ್ ಫಾಲೋವರ್ಸ್ ಆಗಿದ್ದರು. ಇದು ದಾಖಲೆಯೇ ಸರಿ.

ಹೀಗಿರುವ ವಿಜಯ್ ಬರೀ ನಟನೆಯಲ್ಲಷ್ಟೇ ಫೇಮಸ್ ಅಲ್ಲಾ. ಸಮಾಜ ಸೇವೆಯಲ್ಲೂ ಫೇಮಸ್. ಇವರು ಹಲವು ಸಾಾರ್ವಜನಿಕ ಕಲ್ಯಾಣ ಕೆಲಸಗಳನ್ನು ಮಾಡಿದ್ದು, ಬಡವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹಾಗಾಗಿ ವಿಜಯ್ ಅವರ ಹಲವು ಅಭಿಮಾನಿಗಳು, ನೀವು ರಾಜಕೀಯಕ್ಕೆ ಬಂದರೆ, ಇನ್ನೂ ಉತ್ತಮ. ಇದರಿಂದ ಇನ್ನಷ್ಟು ಸಮಾಜ ಸೇವೆ ಮಾಡಬಹುದು ಎಂದಿದ್ದರು. ಅದರಂತೆ ಇದೀಗ ವಿಜಯ್ ಹೊಸ ಪಕ್ಷ ಘೋಷಣೆ ಮಾಡುವ ಮೂಲಕ, ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಆದರೆ ವಿಜಯ್ ಪಕ್ಷ ಈ ವರ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಬದಲಾಗಿ 2026ರಲ್ಲಿ ನಡೆಯುವ ಚುನಾಾವಣೆಗೆ ಸ್ಪರ್ಧಿಸಲಿದೆ. ಅಲ್ಲದೇ, ಈ ವರ್ಷ ಯಾವುದೇ ಪಕ್ಷವನ್ನು ಅವರು ಬೆಂಬಲಿಸುವುದಿಲ್ಲವೆಂದು ಹೇಳಿದ್ದಾರೆ. ಇನ್ನು ಚುನಾವಣಾ ಆಯೋಗದಲ್ಲಿ ಈಗಾಗಲೇ ಪಕ್ಷವನ್ನು ನೋಂದಣಿ ಮಾಡಿಸಲಾಗಿದೆ.

11 ದಿನದಲ್ಲಿ 25 ಲಕ್ಷ ಜನರಿಂದ ಬಾಲಕರಾಮನ ದರ್ಶನ: 11 ಕೋಟಿ ಕಾಣಿಕೆ ಸಂಗ್ರಹ

ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ನಿಧನ

ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ

- Advertisement -

Latest Posts

Don't Miss