ಕೆವಿಎನ್… ಕನ್ನಡದ ದೊಡ್ಡ ನಿರ್ಮಾಣದ ಸಂಸ್ಥೆ ಈಗಾಗಲೇ ಬಿಗ್ ಸ್ಟಾರ್ಸ್ ಸಿನಿಮಾಗಳನ್ನೇ ನಿರ್ಮಾಣ ಮಾಡಲು ಸಜ್ಜಾಗಿರುವ ಕೆವಿಎನ್ ನಿರ್ಮಾಣ ಸಂಸ್ಥೆ ಇದೀಗ ಸೌತ್ ಇಂಡಸ್ಟ್ರಿಯ ಬಿಗ್ ಸ್ಟಾರ್ ದಳಪತಿ ವಿಜಯ್ ಅವರ ಕೊನೆಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ. ಹೌದು, ಈ ಕುರಿತು ಶುಕ್ರವಾರ ಅಧಿಕೃತವಾಗಿ ಸುದ್ದಿ ಹೊರಹಾಕಿರುವ ಕೆವಿಎನ್ ನಿರ್ಮಾಣ ಸಂಸ್ಥೆ ಹೆಮ್ಮೆಯಿಂದ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಅಂದಹಾಗೆ, ಯಶ್ ಅಭಿನಯದ “ಟಾಕ್ಸಿಕ್” ಸಿನಿಮಾವನ್ನು ಕೆವಿಎನ್ ಸಂಸ್ಥೆಯ ವೆಂಕಟ್ ಅವರು ನಿರ್ಮಾಣ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದೀಗ ದಳಪತಿ ವಿಜಯ್ ಅವರ 69 ನೇ ಸಿನಿಮಾ ಸಿದ್ಧತೆಗೆ ತಯಾರು ನಡೆಸಿದೆ. ಇತ್ತೀಚೆಗಷ್ಟೇ ದಳಪತಿ ವಿಜಯ್ ಅವರ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾ ತೆರೆಗೆ ಬಂದಿತ್ತು. ಆ ಸಿನಿಮಾ ಅಷ್ಟೇನು ಸದ್ದು ಮಾಡಲಿಲ್ಲ. ಎಲ್ಲೆಡೆ ಆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ದಳಪತಿ ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ಚಿತ್ರಕ್ಕೆ ಅಣಿಯಾಗಿದ್ದಾರೆ.
ಅದೇನೆ ಇರಲಿ, ಏಕಕಾಲಕ್ಕೆ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡೋದು ಸುಲಭದ ವಿಷಯವಲ್ಲ ಬಿಡಿ. ಸದ್ಯ ಕೆವಿಎನ್ ಸಂಸ್ಥೆ, ‘ಕೆಡಿ-ದಿ ಡೆವಿಲ್’, ‘ಟಾಕ್ಸಿಕ್’ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಕೆಡಿ ಮುಗಿಯುವ ಹಂತ ತಲುಪಿದೆ. ಟಾಕ್ಸಿಕ್ ಕೂಡ ಶುರುವಾಗಿದೆ. ಇದೀಗ ದಳಪತಿ ವಿಜಯ್ ಅವರ 69ನೇ ಚಿತ್ರ ಸೇರಿದೆ. ಅತ್ತ, ನಟ ದಳಪತಿ ವಿಜಯ್ ಅವರು ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. 2026ರ ತಮಿಳುನಾಡು ಚುನಾವಣೆಗೆ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಸದ್ಯ ಅವರು ಪಕ್ಷ ಕಟ್ಟುವ ನಿಟ್ಟಿನಲ್ಲಿ ಅವರು ನಿರತರಾಗಿದ್ದಾರೆ. ಈ ನಡುವೆ ಕೆವಿಎನ್ ಅವರ ಹೊಸ ಸಿನಿಮಾದಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.